ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಾರ್ಚ್ ತಿಂಗಳಿನಲ್ಲಿ ₹36,300 ಕೋಟಿಯಷ್ಟು ಪ್ರೀಮಿಯಂ ಸಂಗ್ರಹಿಸಿದೆ.
ಹಿಂದಿನ ವರ್ಷದ ಮಾರ್ಚ್‌ನಲ್ಲಿ ₹28,716 ಕೋಟಿ ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಪ್ರೀಮಿಯಂ ಸಂಗ್ರಹದಲ್ಲಿ ಶೇ 26.41ರಷ್ಟು ಏರಿಕೆಯಾಗಿದೆ.
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿಯು ಶೇ 24.76ರಷ್ಟು ಹಾಗೂ ಐಸಿಐಸಿಐ ಫ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿಯ ಪ್ರೀಮಿಯಂ ಸಂಗ್ರಹವು ಶೇ 12.58ರಷ್ಟು ಏರಿಕೆಯಾಗಿದೆ.
ಆದರೆ, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿಯ ಪ್ರೀಮಿಯಂ ಸಂಗ್ರಹವು ಶೇ 20.05ರಷ್ಟು ಇಳಿಕೆಯಾಗಿದೆ. ಮಾರ್ಚ್ ತಿಂಗಳಿನಲ್ಲಿ ಸಂಗ್ರಹವಾಗಿರುವ ಪ್ರೀಮಿಯಂನಲ್ಲಿ ಎಲ್‌ಐಸಿ ಪಾಲು ಶೇ 58.87ರಷ್ಟಿದೆ ಎಂದು ಜೀವ ವಿಮಾ ಪರಿಷತ್‌ನ ಅಂಕಿ–ಅಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.