ADVERTISEMENT

ಕೆಲವೇ ವರ್ಷದಲ್ಲಿ ತಲಾ ಆದಾಯ ದ್ವಿಗುಣ: ನಿರ್ಮಲಾ ವಿಶ್ವಾಸ

ಪಿಟಿಐ
Published 4 ಅಕ್ಟೋಬರ್ 2024, 16:33 IST
Last Updated 4 ಅಕ್ಟೋಬರ್ 2024, 16:33 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ: ‘ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳಿಂದ ಮುಂಬರುವ ವರ್ಷಗಳಲ್ಲಿ ದೇಶದ ಜನರ ಜೀವನಮಟ್ಟವು ಸುಧಾರಿಸಲಿದೆ. ಜೊತೆಗೆ, ಭಾರತದ ತಲಾ ಆದಾಯವೂ ದ್ವಿಗುಣಗೊಳ್ಳಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಶುಕ್ರವಾರ ನಡೆದ ಕೌಟಿಲ್ಯ ಆರ್ಥಿಕ ಸಮಾವೇಶದ ಮೂರನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ವಿಶ್ವಬ್ಯಾಂಕ್‌ನ ಗಿನಿ ಸೂಚ್ಯಂಕದ ಪ್ರಕಾರ ದೇಶದಲ್ಲಿ ಅಸಮಾನತೆ ಕಡಿಮೆಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದರು.

ಕಳೆದ ಹತ್ತು ವರ್ಷದಲ್ಲಿ ಸರ್ಕಾರ ಕೈಗೊಂಡ ಆರ್ಥಿಕ ಹಾಗೂ ರಚನಾತ್ಮಕ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದರು.

ADVERTISEMENT

‘ಭಾರತದ ತಲಾ ಆದಾಯವು 2,730 ಡಾಲರ್‌ ತಲುಪಲು 75 ವರ್ಷಗಳು ಬೇಕಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ. ಆದರೆ, 2,000 ಡಾಲರ್‌ ತಲುಪಲು ಐದು ವರ್ಷ ಸಾಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.