ನವದೆಹಲಿ: ಸರಕು ಸಾಗಣೆ ಉದ್ಯಮಕ್ಕೆ ಪ್ರತ್ಯೇಕವಾದ ವಿಭಾಗ ರಚನೆ ಮಾಡುವಂತೆ ಕೇಂದ್ರ ವಾಣಿಜ್ಯ ಸಚಿವಾಲಯವು ಸರ್ಕಾರಕ್ಕೆ ಪ್ರಸ್ತವಾ ಸಲ್ಲಿಸಿದೆ.
ಸರಕು ಸಾಗಣೆ ಉದ್ಯಮದ ಬೆಳವಣಿಗೆಗಾಗಿ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತ್ಯೇಕವಾದ ವಿಭಾಗ ರಚನೆ ಮಾಡುವ ಅಗತ್ಯ ಇದೆ. ರಫ್ತು ಮತ್ತು ಆಮದು ವಹಿವಾಟು ಹೆಚ್ಚಿಸಲು ಇದು ಮುಖ್ಯವಾಗಿದೆ ಎಂದು ಹೇಳಿದೆ.
ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರಕ್ಕಾಗಿ ಸಚಿವಾಲಯ100ದಿನದಕಾರ್ಯಕ್ರಮಗಳ ಪ್ರಸ್ತಾವನೆ ಸಿದ್ಧಪಡಿಸಿದ್ದು, ರಫ್ತು ವಹಿವಾಟು ಹೆಚ್ಚಿಸಲು ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡುವ ಅಂಶಗಳನ್ನು ತಿಳಿಸಿದೆ.
ಸದ್ಯ ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ನೇತೃತ್ವದಲ್ಲಿ ಸರಕುಸಾಗಣೆ ತಂಡ ಕಾರ್ಯನಿರ್ವಹಿಸುತ್ತಿದೆ.
ಸಾಗಣೆ ವೆಚ್ಚ ಮತ್ತು ಸಮಯ ತಗ್ಗಿಸುವ ಮೂಲಕ ಸರಕು ಸಾಗಣೆ ವ್ಯವಸ್ಥೆ ಸುಗಮಗೊಳಿಸಬೇಕು. ಆ ಮೂಲಕ ರಫ್ತುದಾರರು ಮತ್ತು ದೇಶಿ ವರ್ತಕರ ಮಧ್ಯೆ ಪೈಪೋಟಿ ಹೆಚ್ಚಾಗುವಂತೆ ಮಾಡಬೇಕು. ರಸ್ತೆ, ರೈಲು, ಬಂದರು, ವಿಮಾನ ವಲಯದ ಸಹಕಾರ ಅಗತ್ಯ.
ರಫ್ತು ವಹಿವಾಟು ಹೆಚ್ಚಳದಿಂದ ಉದ್ಯೋಗ ಸೃಷ್ಟಿ, ತಯಾರಿಕಾ ವಲಯದ ಪ್ರಗತಿ ಮತ್ತು ವಿದೇಶಿ ವಿನಿಮಯ ಗಳಿಕೆಗೂ ಅನುಕೂಲವಾಗಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.