ADVERTISEMENT

ವಾಣಿಜ್ಯ ಬಳಕೆಯ ಅಡುಗೆ ಅನಿಲ, ಎಟಿಎಫ್ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 22:30 IST
Last Updated 1 ಮಾರ್ಚ್ 2022, 22:30 IST
   

ಬೆಂಗಳೂರು: ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್‌ಗೆ ಮಂಗಳವಾರ ₹ 105ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು ಬೆಂಗಳೂರಿನಲ್ಲಿ ₹ 2,075ಕ್ಕೆ ಏರಿಕೆ ಆಗಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರುವರಿ 28ರಂದು ವಾಣಿಜ್ಯ ಬಳಕೆ ಎಲ್‌ಪಿಜಿ ದರವು ಬೆಂಗಳೂರಿನಲ್ಲಿ ₹ 1,970 ಆಗಿತ್ತು.

ನವದೆಹಲಿ (ಪಿಟಿಐ): ವಿಮಾನಗಳಲ್ಲಿ ಬಳಸುವ ಇಂಧನದ (ಎಟಿಎಫ್) ಬೆಲೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಶೇಕಡ 3.22ರಷ್ಟು ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆಯು ಪ್ರತಿ ಕಿಲೋ ಲೀಟರ್‌ಗೆ ₹ 3,010ರಷ್ಟು ಹೆಚ್ಚಾಗಿ, ₹ 93,530ಕ್ಕೆ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠ ಮೊತ್ತ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಜಾಸ್ತಿ ಆಗುತ್ತಿರುವ ಪರಿಣಾಮವಾಗಿ ಎಟಿಎಫ್ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸತತ 116 ದಿನಗಳಿಂದ ಬದಲಾವಣೆ ಮಾಡಿಲ್ಲ. ಜನವರಿಯ ಆರಂಭದಿಂದ ಇದುವರೆಗೆ ಎಟಿಎಫ್‌ ಬೆಲೆಯನ್ನು ಕಿಲೋ ಲೀಟರ್‌ಗೆ ₹ 19,508ರಷ್ಟು ಹೆಚ್ಚಳ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.