ನವದೆಹಲಿ (ಪಿಟಿಐ): ಮೂಲಸೌಕರ್ಯ ವಲಯದ ಲಾರ್ಸನ್ ಆ್ಯಂಡ್ ಟುರ್ಬೊ (ಎಲ್ಆ್ಯಂಡ್‌ಟಿ) ಸಂಸ್ಥೆಯು ಮೈಂಡ್‌ಟ್ರೀ ಕಂಪನಿಯಲ್ಲಿ
ಶೇ 60.06ರಷ್ಟು ಷೇರುಗಳನ್ನು ಹೊಂದುವ ಮೂಲಕ ಪ್ರವರ್ತಕರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮೈಂಡ್‌ಟ್ರೀ ತಿಳಿಸಿದೆ.
ಕಂಪನಿಯನ್ನು ವಶಕ್ಕೆ ಪಡೆಯುವುದಕ್ಕೆ ಮೈಂಡ್‌ಟ್ರೀನ ಪ್ರವರ್ತಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅದು ಫಲ ನೀಡಲಿಲ್ಲ. ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಕಂಪನಿಯ ಮೇಲೆ ಎಲ್‌ಅ್ಯಂಡ್‌ಟಿ ಕೊನೆಗೂ ನಿಯಂತ್ರಣ ಸಾಧಿಸಿದೆ.
ಇತ್ತೀಚೆಗೆ ಮುಕ್ತಾಯವಾದ ಮುಕ್ತ ಕೊಡುಗೆಯ ಬಳಿಕ ಮೈಂಡ್‌ಟ್ರೀನ 9.87 ಕೋಟಿ ಷೇರುಗಳನ್ನು ಸಂಸ್ಥೆಯು ಹೊಂದಿದೆ.
ನಳಂದ ಇಂಡಿಯಾ ಫಂಡ್ ಮತ್ತು ನಳಂದ ಇಂಡಿಯಾ ಈಕ್ವಿಟಿ ಫಂಡ್ ಕಂಪನಿಗಳು ಸಹ ಮೈಂಡ್‌ಟ್ರೀನಲ್ಲಿ ಹೊಂದಿದ್ದ ಶೇ 10.60ರಷ್ಟು ಷೇರುಗಳಲ್ಲಿ ಶೇ 8.90ರಷ್ಟು ಷೇರುಗಳನ್ನುಎಲ್‌ಆ್ಯಂಡ್‌ಟಿನ
ಮುಕ್ತ ಕೊಡುಗೆಯಲ್ಲಿ ಮಾರಾಟ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.