ADVERTISEMENT

ಎಲ್‌ಆ್ಯಂಡ್‌ಟಿ ರಿಯಾಲ್ಟಿಯಿಂದ ಕಚೇರಿ ಸ್ಥಳ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 16:34 IST
Last Updated 8 ನವೆಂಬರ್ 2022, 16:34 IST
   

ಬೆಂಗಳೂರು: ಎಲ್‌ಆ್ಯಂಡ್‌ಟಿ ಕಂಪನಿಯ ಅಂಗಸಂಸ್ಥೆಯಾಗಿರುವ ಎಲ್ಆ್ಯಂಡ್‌ಟಿ ರಿಯಾಲ್ಟಿ ಮತ್ತು ಸಿಂಗಪುರದ ಕ್ಯಾಪಿಟಾಲ್ಯಾಂಡ್ ಇಂಡಿಯಾ ಟ್ರಸ್ಟ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಒಟ್ಟಾಗಿ ದೇಶದಲ್ಲಿ 60 ಲಕ್ಷ ಚದರ ಅಡಿ ವೀಸ್ತೀರ್ಣದ ಕಚೇರಿ ಸ್ಥಳಗಳನ್ನು ಅಭಿವೃದ್ಧಿಪಡಿಸಲಿವೆ. ಈ ವಿಚಾರವಾಗಿ ಎರಡೂ ಕಂಪನಿಗಳ ನಡುವೆ ಒಪ್ಪಂದ ಆಗಿದೆ.

ಬೆಂಗಳೂರು, ಚೆನ್ನೈ ಮತ್ತು ಮುಂಬೈ ಮಹಾನಗರಗಳಲ್ಲಿ ಒಟ್ಟು 60 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳಗಳನ್ನು ಈ ಎರಡು ಕಂಪನಿಗಳು ನಿರ್ಮಾಣ ಮಾಡಲಿವೆ.

ನಿರ್ಮಾಣ ಯೋಜನೆಯು 2024ರ ದ್ವಿತೀಯಾರ್ಧದಲ್ಲಿ ಆರಂಭವಾಗಲಿದ್ದು,ಕ್ಯಾಪಿಟಾಲ್ಯಾಂಡ್ ಇಂಡಿಯಾ ಟ್ರಸ್ಟ್ (ಕ್ಲಿಂಟ್) ಇದರಲ್ಲಿ ಹೆಚ್ಚಿನ ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಎಲ್ಆ್ಯಂಡ್‌ಟಿ ರಿಯಾಲ್ಟಿ ಅಭಿವೃದ್ಧಿಪಡಿಸುವ ಈ ಕಚೇರಿ ಸ್ಥಳಗಳ ಮಾಲಿಕತ್ವವನ್ನು ಕ್ಲಿಂಟ್ ಹಂತ ಹಂತವಾಗಿ ಸ್ವಾಧೀನಕ್ಕೆ ಪಡೆಯಲಿದೆ.

ADVERTISEMENT

‘ಭಾರತದಲ್ಲಿ ಕಚೇರಿ ಸ್ಥಳಗಳ ಗುತ್ತಿಗೆ ಮಾರುಕಟ್ಟೆ ಬೆಳೆಯುತ್ತಿದೆ. 2022ರ ಜನವರಿ–ಸೆಪ್ಟೆಂಬರ್ ಅವಧಿಯಲ್ಲಿ 3 ಕೋಟಿ ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳ ಮಾರಾಟವಾಗಿದೆ. ಇದು ಕಳೆದ ಮೂರು ವರ್ಷಗಳ ಅತ್ಯಧಿಕ ಮಟ್ಟ’ ಎಂದುಎಲ್ಆ್ಯಂಡ್‌ಟಿ ರಿಯಾಲ್ಟಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಜೋಷಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.