ADVERTISEMENT

ಉದ್ದೇಶಿತ ವಿಲೀನಕ್ಕೆ ಆರ್‌ಬಿಐ ನಕಾರ

ಪಿಟಿಐ
Published 9 ಅಕ್ಟೋಬರ್ 2019, 17:21 IST
Last Updated 9 ಅಕ್ಟೋಬರ್ 2019, 17:21 IST
ಆರ್‌ಬಿಐ
ಆರ್‌ಬಿಐ   

ನವದೆಹಲಿ: ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ನಲ್ಲಿ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ವಿಲೀನಗೊಳಿಸುವ ಉದ್ದೇಶಿತ ಪ್ರಸ್ತಾವಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನುಮತಿ ನೀಡಿಲ್ಲ.

‘ಎಲ್‌ವಿಬಿ’ನಲ್ಲಿ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಮತ್ತು ಇಂಡಿಯಾ ಬುಲ್ಸ್‌ ಕಮರ್ಷಿಯಲ್‌ ಕ್ರೆಡಿಟ್‌ ಲಿಮಿಟೆಡ್‌ನ ವಿಲೀನದ ಪ್ರಸ್ತಾಪಕ್ಕೆ ಆರ್‌ಬಿಐ ಅನುಮತಿ ನಿರಾಕರಿಸಿದೆ.

ಈ ಸಂಬಂಧ ಬುಧವಾರ ಮಾಹಿತಿ ನೀಡಿದೆ ಎಂದು ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ಷೇರುಪೇಟೆಗೆ ತಿಳಿಸಿದೆ.

ADVERTISEMENT

ವಸೂಲಾಗದ ಸಾಲ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಆರ್ಥಿಕ ನಷ್ಟ ಭರಿಸಲು ಸಾಕಷ್ಟು ಬಂಡವಾಳ ತೆಗೆದಿರಿಸದೇ ಇರುವ ಕಾರಣಕ್ಕಾಗಿ ಆರ್‌ಬಿಐ, ಸೆಪ್ಟೆಂಬರ್‌ನಲ್ಲಿ ‘ಎಲ್‌ವಿಬಿ’ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧಗಳನ್ನು (ಪಿಸಿಎ) ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.