ADVERTISEMENT

ಕಾಸಿಯಾ ಅಧ್ಯಕ್ಷರಾಗಿ ಎಂ.ಜಿ. ರಾಜಗೋಪಾಲ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:58 IST
Last Updated 1 ಜುಲೈ 2024, 15:58 IST
<div class="paragraphs"><p>ಎಂ.ಜಿ. ರಾಜಗೋಪಾಲ್‌</p></div>

ಎಂ.ಜಿ. ರಾಜಗೋಪಾಲ್‌

   

ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) 2024–25ನೇ ಸಾಲಿನ ಅಧ್ಯಕ್ಷರಾಗಿ ಹಿರಿಯ ಉದ್ಯಮಿ ಎಂ.ಜಿ. ರಾಜಗೋಪಾಲ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಬಿ.ಆರ್. ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಜಂಟಿ ಕಾರ್ಯದರ್ಶಿ (ನಗರ) ಬಾಬು ಜೆ.ಎಸ್., ಜಂಟಿ ಕಾರ್ಯದರ್ಶಿ (ಗ್ರಾಮೀಣ) ಸತೀಶ್ ಎನ್. ಮತ್ತು ಖಜಾಂಚಿಯಾಗಿ ಮಂಜುನಾಥ್ ಎಚ್. ನೇಮಕವಾಗಿದ್ದಾರೆ. ನೂತನ ಪದಾಧಿಕಾರಿಗಳು ಅಧಿಕಾರಾವಧಿ ಒಂದು ವರ್ಷ ಇರಲಿದೆ ಎಂದು ಕಾಸಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ವಿಜ್ಞಾನ ಮತ್ತು ಕಾನೂನು ಪದವಿಧರರಾದ ರಾಜಗೋಪಾಲ್‌, ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸಂಸ್ಥೆಯಲ್ಲಿ 20 ವರ್ಷಗಳ ಕಾಲ ಅಕೌಂಟ್ಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ (ವಿಆರ್‌ಎಸ್) ತೆಗೆದುಕೊಂಡು  ಕೈಗಾರಿಕೋದ್ಯಮಿಯಾಗಿದ್ದಾರೆ.

ರಾಜಗೋಪಾಲ್ ಅವರು ಕಾಸಿಯಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಕಾಸಿಯಾದ ಜಂಟಿ ಕಾರ್ಯದರ್ಶಿ-ಗ್ರಾಮಾಂತರ ಮತ್ತು ಪ್ರಧಾನ ಕಾರ್ಯದರ್ಶಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಎಫ್‌ಕೆಸಿಸಿಐನ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.