ADVERTISEMENT

ಮಹೀಂದ್ರ ಎಕ್ಸ್‌ಯುವಿ400 ಹೊಸ ಶ್ರೇಣಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 17:05 IST
Last Updated 11 ಜನವರಿ 2024, 17:05 IST
ಉದ್ಯಮಿ ಆನಂದ್ ಮಹೀಂದ್ರ
ಉದ್ಯಮಿ ಆನಂದ್ ಮಹೀಂದ್ರ   

ಬೆಂಗಳೂರು: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ಗುರುವಾರ ಹೊಸ ಎಲೆಕ್ಟ್ರಿಕ್ ಎಕ್ಸ್‌ಯುವಿ400 ಪ್ರೊ ಶ್ರೇಣಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ಈ ಕಾರುಗಳ ಎಕ್ಸ್ ಷೋರೂಂ ಬೆಲೆ ₹15.49 ಲಕ್ಷದಿಂದ ಆರಂಭವಾಗಲಿದೆ. ಇಸಿ ಪ್ರೊ (34.5ಕೆಡಬ್ಲ್ಯುಎಚ್ ಬ್ಯಾಟರಿ, 3.3 ಡಬ್ಲ್ಯು ಎಸಿ ಚಾರ್ಜರ್), ಇಎಲ್ ಪ್ರೊ (34.5 ಕೆಡಬ್ಲ್ಯುಎಚ್ ಬ್ಯಾಟರಿ, 7.2 ಡಬ್ಲ್ಯು ಎಸಿ ಚಾರ್ಜರ್) ಮತ್ತು ಇಎಲ್ ಪ್ರೊ (39.4 ಕೆಡಬ್ಲ್ಯುಎಚ್ ಬ್ಯಾಟರಿ, 7.2 ಡಬ್ಲ್ಯು ಎಸಿ ಚಾರ್ಜರ್) ಆವೃತ್ತಿಗಳಲ್ಲಿ ಕಾರುಗಳು ಲಭ್ಯವಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಜನವರಿ 12ರ ಮಧ್ಯಾಹ್ನ 2 ಗಂಟೆಯಿಂದ ಬುಕಿಂಗ್‌ ಪ್ರಾರಂಭವಾಗಲಿದೆ. ಈ ಶ್ರೇಣಿಯ ಕಾರುಗಳು ಸುಧಾರಿತ ತಂತ್ರಜ್ಞಾನ ಹೊಂದಿವೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.