ಬೆಂಗಳೂರು: ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್ ಕಂಪನಿಯು ಟಿಯುಎಲ್‌ಐಪಿ (ಟರ್ಮ್ ವಿತ್ ಯುನಿಟ್ ಲಿಂಕ್ಡ್ ಇನ್ಶುರೆನ್ಸ್) ವಿಮಾ ಯೋಜನೆಗೆ ಚಾಲನೆ ನೀಡಿದೆ.
ನಗರದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್ ಕಂಪನಿಯ ಏಜೆನ್ಸಿ ಚಾನೆಲ್ಸ್ ಮುಖ್ಯಸ್ಥ ವಿವೇಕ್ ಪ್ರಕಾಶ್, ‘ಈ ಯೋಜನೆಯು ವಿಮಾದಾರರಿಗೆ ವಾರ್ಷಿಕ ಪ್ರೀಮಿಯಂನ ನೂರು ಪಟ್ಟು ರಕ್ಷಣೆ ಒದಗಿಸುತ್ತದೆ’ ಎಂದರು.
ಜತೆಗೆ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಅಲ್ಲದೆ ಗ್ರಾಹಕರಿಗೆ ಯುನಿಟ್- ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್‌ನಂತೆ (ಯೂಲಿಪ್) ಆದಾಯ ಗಳಿಸುವ ಅವಕಾಶವನ್ನೂ ನೀಡುತ್ತದೆ. ಗಂಭೀರ ಕಾಯಿಲೆ ಮತ್ತು ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣೆ ನೀಡುತ್ತದೆ ಎಂದು ತಿಳಿಸಿದರು.
ಕೋಟಕ್ ಲೈಫ್ ಟಿಯುಎಲ್‌ಐಪಿ ಯೋಜನೆಯಡಿ ವಿಮಾದಾರರು ಮೆಚ್ಯುರಿಟಿ ಪ್ರಯೋಜನಗಳ ಭಾಗವಾಗಿ ನಿಧಿಯ ಮೌಲ್ಯದ ಶೇ 30ರ ವರೆಗೆ ಲಾಯಲ್ಟಿ ಪಡೆಯಲಿದ್ದಾರೆ. 10, 11, 12 ಮತ್ತು 13ನೇ ವರ್ಷದಲ್ಲಿ ಪ್ರೀಮಿಯಂ ಹಂಚಿಕೆ ಶುಲ್ಕಗಳ ಎರಡು ಪಟ್ಟು ಮರುಪಾವತಿ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್‌ನ ಈಕ್ವಿಟಿ ವಿಭಾಗದ ಮುಖ್ಯಸ್ಥ ಹೇಮಂತ್ ಕೋನವಾಲಾ ಮಾತನಾಡಿ, ವಿಮಾದಾರರಿಗೆ ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಹಣ ಹಿಂಪಡೆಯುವ ಅವಕಾಶವಿದೆ. ಅಪಘಾತ, ಆಕಸ್ಮಿಕ ಸಾವು ಮತ್ತು ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ದೊರೆಯಲಿದೆ. ವಿಮಾದಾರರು ತಮ್ಮ ಹಣವನ್ನು ಹೂಡಿಕೆ ಮಾಡಲು ಎಂಟು ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.