ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗಿದ್ದು, ಕಂಪನಿಯ ಲಾಭವು ಶೇಕಡ 44ರಷ್ಟು ಏರಿಕೆ ಆಗಿದೆ.
ಕಂಪನಿಯು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹ 2,773 ಕೋಟಿ ಲಾಭ ಗಳಿಸಿದೆ. ವಾಹನ ಹಾಗೂ ಕೃಷಿ ಉಪಕರಣ ವಿಭಾಗಗಳಲ್ಲಿ ಒಳ್ಳೆಯ ವಹಿವಾಟು ನಡೆದಿದ್ದು ಲಾಭ ಹೆಚ್ಚಳಕ್ಕೆ ನೆರವಾಗಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 1,929 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ₹ 29,870 ಕೋಟಿಗೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.