ಮುಂಬೈ: ಬಹು ಬಳಕೆ ಉದ್ದೇಶಿತ ವಾಹನಗಳ (ಎಂಯುವಿ) ತಯಾರಿಕೆಯಲ್ಲಿ ಮುಂಚೂಣಿಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಫೆಬ್ರುವರಿಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ‘ಎಕ್ಸ್‌ಯುವಿ300’ ಬಿಡುಗಡೆ ಮಾಡಲಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿನ ಘಟಕದಲ್ಲಿ ಎಕ್ಸ್‌ಯುವಿ300 ತಯಾರಾಗಲಿದೆಎಂದು ಕಂಪನಿ ತಿಳಿಸಿದೆ.
ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಕಂಪನಿ ಸ್ಯಾಂಗ್‌ಯಾಂಗ್ ಜತೆಗೂಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದ ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದೆ.
‘ಮಹೀಂದ್ರಾ ವಾಹನಗಳನ್ನು ಖರೀದಿಸುವ ಮುಂದಿನ ಪೀಳಿಗೆಯ ಗ್ರಾಹಕರಿಗಾಗಿ ಈ ಎಕ್ಸ್‌ಯುವಿ300 ಪರಿಚಯಿಸಲಾಗಿದೆ. ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸ್‌ಯವಿ500ನ ವೈಶಿಷ್ಟ್ಯಗಳನ್ನೂ ಈ ಹೊಸ ಎಸ್‌ಯುವಿ ಒಳಗೊಂಡಿರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ತಿಳಿಸಿದ್ದಾರೆ.
‘ಆಧುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಮತ್ತು ಉತ್ತಮ ಒಳವಿನ್ಯಾಸದೊಂದಿಗೆ ಗ್ರಾಹಕರನ್ನು ಆಕರ್ಷಿಸುವ ವಿಶ್ವಾಸವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರಲಿದೆ ಎಂದು ಕಂಪನಿಯ ಅಧ್ಯಕ್ಷ ರಾಜನ್ ವಧೇರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.