ADVERTISEMENT

ಚಿನ್ನ ಆಮದು: ಮಲಬಾರ್ ಗೋಲ್ಡ್‌ಗೆ ಟಿಆರ್‌ಕ್ಯು ಪರವಾನಗಿ

​ಪ್ರಜಾವಾಣಿ ವಾರ್ತೆ
Published 22 ಮೇ 2023, 16:21 IST
Last Updated 22 ಮೇ 2023, 16:21 IST
ಮಲಬಾರ್‌
ಮಲಬಾರ್‌   

ಬೆಂಗಳೂರು: ಚಿನ್ನವನ್ನು ಆಮದು ಮಾಡಿಕೊಳ್ಳಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ (ಡಿಜಿಎಫ್‌ಟಿ) ಟಿಆರ್‌ಕ್ಯು ಪರವಾನಗಿ ಪಡೆದುಕೊಂಡಿರುವುದಾಗಿ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಕಂಪನಿ ತಿಳಿಸಿದೆ.

ಭಾರತ–ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಬುಲಿಯನ್ ಎಕ್ಸ್‌ಚೇಂಜ್‌ (ಐಐಬಿಎಕ್ಸ್‌) ಮೂಲಕ ಚಿನ್ನವನ್ನು ಆಮದು ಮಾಡಿಕೊಳ್ಳಲು ಟಿಆರ್‌ಕ್ಯು ನೆರವಾಗಲಿದೆ. ಸುಂಕ ಪ್ರಮಾಣ ಕಡಿಮೆ ಆಗುವುದಲ್ಲದೆ ಪಾರದರ್ಶಕ ಆಮದು ಸಹ ಸಾಧ್ಯವಾಗಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಈ ಪರವಾನಗಿ ಪಡೆದಿರುವ ಭಾರತದ ಮೊದಲ ಆಭರಣ ಸಮೂಹ ಎಂಬ ಹೆಗ್ಗಳಿಕೆಗೆ ಮಲಬಾರ್ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಪಾತ್ರವಾಗಿರುವುದು ಹೆಮ್ಮೆಯ ವಿಷಯ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದರಿಂದಾಗಿ ಮೇಕ್‌ ಇನ್‌ ಇಂಡಿಯಾ; ಮಾರ್ಕೆಟ್‌ ಟು ದಿ ವರ್ಲ್ಡ್‌ ಗುರಿ ಸಾಧಿಸಲು ನೆರವಾಗಲಿದೆ’ ಎಂದು ಮಲಬಾರ್‌ ಸಮೂಹದ ಅದ್ಯಕ್ಷ ಎಂ.ಪಿ. ಅಹ್ಮದ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.