ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯು ಮಹಾರಾಷ್ಟ್ರದಲ್ಲಿ 2024–25ರಲ್ಲಿ ₹1 ಸಾವಿರ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದು, ಇದರಿಂದಾಗಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದೆ.
ಭಾರತದಲ್ಲಿ ಕೇಂದ್ರೀಕೃತ ಕಾರ್ಯಾಚರಣೆ ನಡೆಸಲು ಅನುಕೂಲ ಆಗುವಂತೆ ಮುಂಬೈನಲ್ಲಿ ‘ಮಲಬಾರ್ ನ್ಯಾಷನಲ್ ಹಬ್’ ಆರಂಭಿಸುವ ವೇಳೆ ಕಂಪನಿಯು ಈ ಘೋಷಣೆ ಮಾಡಿದೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಕೆಂದ್ರವನ್ನು ಉದ್ಘಾಟಿಸಿದರು.
ಭವಿಷ್ಯದ ಬೆಳವಣಿಗೆಗೆ ಈ ಕೇಂದ್ರವು ತಳಹದಿ ಆಗಲಿದೆ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.