ಬೆಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಕರ್ಷಕ ಹೊಸ ಸಂಗ್ರಹವಾದ ‘ಸ್ವರ್ಣಕೃತಿ’ ಹೆಸರಿನ ಆಭರಣವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಆಭರಣವು ತನ್ನ ಸಮಕಾಲೀನ ವಿನ್ಯಾಸದೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ನುರಿತ ಕುಶಲಕರ್ಮಿಗಳಿಂದ ಸಿದ್ಧಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಸಂಗ್ರಹವು ವಿಶ್ವದಾದ್ಯಂತ ಇರುವ ಕಂಪನಿಯ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ. ಗ್ರಾಹಕರು ಹತ್ತಿರದ ಮಳಿಗೆಗಳಿಗೆ ತೆರಳಿ ಖರೀದಿಸಬಹುದಾಗಿದೆ ಎಂದು ಹೇಳಿದೆ.
‘ಸ್ವರ್ಣಕೃತಿಯೊಂದಿಗೆ ನಾವು ಕೇವಲ ಕರಕುಶಲ ಚಿನ್ನದ ಆಭರಣಗಳ ಸೌಂದರ್ಯವನ್ನಷ್ಟೇ ಆಚರಣೆ ಮಾಡುತ್ತಿಲ್ಲ. ಪ್ರತಿ ಆಭರಣದ ತುಣುಕು ಪ್ರತಿನಿಧಿಸುವ ಭವ್ಯ ಪರಂಪರೆ ಮತ್ತು ಸೊಬಗನ್ನು ಆಚರಿಸುತ್ತಿದ್ದೇವೆ. ಆಧುನಿಕತೆ ಅಳವಡಿಸಿಕೊಳ್ಳುವ ಜೊತೆಗೆ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ಮಹಿಳೆಯರಿಗೆ ಈ ಸಂಗ್ರಹವು ಗೌರವದ ಸಂಕೇತವಾಗಿದೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.