ADVERTISEMENT

ಎಎಂಆರ್‌ಐ ಹಾಸ್ಪಿಟಲ್ಸ್‌ನ ಶೇ 84ರಷ್ಟು ಷೇರು ಮಣಿಪಾಲ್ ಹಾಸ್ಟಿಟಲ್ಸ್‌ ತೆಕ್ಕೆಗೆ

ಪಿಟಿಐ
Published 20 ಸೆಪ್ಟೆಂಬರ್ 2023, 14:29 IST
Last Updated 20 ಸೆಪ್ಟೆಂಬರ್ 2023, 14:29 IST
ಮಣಿಪಾಲ್ ಹಾಸ್ಪಿಟಲ್ಸ್ (ಸಂಗ್ರಹ ಚಿತ್ರ)
ಮಣಿಪಾಲ್ ಹಾಸ್ಪಿಟಲ್ಸ್ (ಸಂಗ್ರಹ ಚಿತ್ರ)   

ನವದೆಹಲಿ: ಇಮಾಮಿ ಸಮೂಹದ ಎಎಂಆರ್‌ಐ ಹಾಸ್ಪಿಟಲ್ಸ್‌ ಲಿಮಿಟೆಡ್‌ನ ಶೇ 84ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಮಣಿಪಾಲ್‌ ಹಾಸ್ಟಿಟಲ್ಸ್‌ ಬುಧವಾರ ತಿಳಿಸಿದೆ. ಸ್ವಾಧೀನದ ಮೊತ್ತವನ್ನು ತಿಳಿಸಿಲ್ಲ.

ಇಮಾಮಿ ಸಮೂಹವು ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಶೇ 15ರಷ್ಟು ಷೇರುಪಾಲು ಉಳಿಸಿಕೊಳ್ಳಲಿದ್ದು, ಹೂಡಿಕೆದಾರ ಆಗಿ ಮುಂದುವರಿಯಲಿದೆ. ಪೂರ್ವ ಬಾಗದಲ್ಲಿ ಮಣಿಪಾಲ್‌ ಹಾಸ್ಟಿಟಲ್ಸ್‌ನ ವಹಿವಾಟು ವಿಸ್ತರಣೆಗೆ ಈ ಸ್ವಾಧೀನವು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪಶ್ಚಿಮ ಬಂಗಾಳ ಸರ್ಕಾರವು ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಶೇ 1ರಷ್ಟು ಷೇರುಪಾಲನ್ನು ಹೊಂದಿದೆ ಎಂದೂ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.