ನವದೆಹಲಿ: ದೇಶದ ಪ್ರಮುಖ ಫಾರ್ಮಾ ಕಂಪನಿಯಾದ ಮ್ಯಾನ್‌ಕೈಂಡ್ (Mankind), ಮತ್ತೊಂದು ಪ್ರಮುಖ ಫಾರ್ಮಾ ಕಂಪನಿಯಾದ ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
ಭಾರತ್ ಸೀರಮ್ಸ್ ಆ್ಯಂಡ್ ವ್ಯಾಕ್ಸಿನ್ಸ್ ಕಂಪನಿಯಲ್ಲಿ ಅಮೆರಿಕ ಮೂಲದ Advent International ಹೊಂದಿರುವ ಶೇ 100 ರಷ್ಟು ಷೇರುಗಳನ್ನು ಮ್ಯಾನ್‌ಕೈಂಡ್ ಖರೀದಿಸಿದೆ. ಈ ಒಪ್ಪಂದಕ್ಕೆ ಗುರುವಾರ ಅಂತಿಮ ಮುದ್ರೆ ಬಿದ್ದಿದೆ. ಈ ಷೇರುಗಳ ಮೌಲ್ಯ ₹13,630 ಕೋಟಿ.
ಮ್ಯಾನ್‌ಕೈಂಡ್, ಕಾಂಡೋಮ್ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಔಷಧ ಹಾಗೂ ಇತರ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿದೆ.
ಭಾರತ್ ಸೀರಂಸ್ ಇಷ್ಟು ದಿನ ಅಮೆರಿಕದ ಷೇರು ಹೂಡಿಕೆ ಕಂಪನಿ Advent International ಹಿಡಿತದಲ್ಲಿತ್ತು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮ್ಯಾನ್‌ಕೈಂಡ್ ಕಂಪನಿ ಎಂಡಿ ರಾಜೀಚ್ ಜುನೇಜಾ, ಈ ಒಪ್ಪಂದವು ಮ್ಯಾನ್‌ಕೈಂಡ್ ಕಂಪನಿಯ ಹೊಸ ಮೈಲುಗಲ್ಲಾಗಲಿದೆ. ಮಹಿಳೆಯರ ಆರೋಗ್ಯ ಹಾಗೂ ಗರ್ಭಧಾರಣೆ ವಿಭಾಗದ ಮಾರುಕಟ್ಟೆಯಲ್ಲಿ ನಮ್ಮನ್ನು ನಾಯಕರನ್ನಾಗಿ ಮಾಡಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.