ADVERTISEMENT

ಅಸಂಘಟಿತ ಕಾರ್ಮಿಕರಿಗೆ ಒಂದೇ ಸೂರಿನಡಿ ಮಾಹಿತಿ ಲಭ್ಯ: ಮನ್ಸುಖ್‌ ಮಾಂಡವೀಯ

ಪಿಟಿಐ
Published 20 ಅಕ್ಟೋಬರ್ 2024, 14:04 IST
Last Updated 20 ಅಕ್ಟೋಬರ್ 2024, 14:04 IST
<div class="paragraphs"><p>ಮನ್ಸುಖ್‌ ಮಾಂಡವೀಯ</p></div>

ಮನ್ಸುಖ್‌ ಮಾಂಡವೀಯ

   

ನವದೆಹಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವೀಯ ಅವರು ಸೋಮವಾರ ‘ಇ–ಶ್ರಮ್‌–ಒನ್‌ ಸ್ಟಾಪ್‌ ಸಲ್ಯೂಷನ್‌’ಗೆ ಚಾಲನೆ ನೀಡಲಿದ್ದಾರೆ. ಇದರಡಿ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದೇ ಸೂರಿನಡಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯಲಿದೆ‌.

ಬಜೆಟ್‌ನಲ್ಲಿ ಈ ಬಗ್ಗೆ ಸರ್ಕಾರವು ಪ್ರಕಟಿಸಿತ್ತು. ಯೋಜನೆಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಲು ಇದನ್ನು ರೂಪಿಸಲಾಗಿದೆ. 

ADVERTISEMENT

ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಫಲಾನುಭವಿಗಳು ಮಾಹಿತಿ ಪಡೆಯಲು ಇದರಿಂದ ನೆರವಾಗಲಿದೆ. 

ಈಗಾಗಲೇ ಇ–ಶ್ರಮ್‌ ಪೋರ್ಟಲ್‌ನಲ್ಲಿ ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳ 12 ಯೋಜನೆಗಳನ್ನು ಸಂಯೋಜಿಸಲಾಗಿದೆ. 2021ರ ಆಗಸ್ಟ್‌ 26ರಂದು ಇ–ಶ್ರಮ್‌ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ. ಅಸಂಘಟಿತ ವಲಯದ 30 ಕೋಟಿಗೂ ಹೆಚ್ಚು ಕಾರ್ಮಿಕರು ಇದರಡಿ ನೋಂದಣಿ ಮಾಡಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.