ADVERTISEMENT

‘ಮಾರ್ಗದರ್ಶಿ’ಗೆ 60ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:20 IST
Last Updated 30 ಸೆಪ್ಟೆಂಬರ್ 2022, 16:20 IST

ಬೆಂಗಳೂರು: ಉದ್ಯಮಿ ರಾಮೋಜಿ ರಾವ್ ಅವರು ಆರಂಭಿಸಿದ ಮಾರ್ಗದರ್ಶಿ ಚಿಟ್‌ ಫಂಡ್ ಪ್ರೈವೇಟ್ ಲಿಮಿಟೆಡ್‌ ಕಂಪನಿ 60 ವರ್ಷಗಳನ್ನು ಪೂರೈಸಿದೆ.

‘1962ರಲ್ಲಿ ಆರಂಭ ಆದಾಗಿನಿಂದಲೂ ಕಂಪನಿಯು ಸಾರ್ವಜನಿಕರಲ್ಲಿ ಉಳಿತಾಯ ಮನೋಭಾವವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತ ಬಂದಿದೆ. ಈ ಮೂಲಕ ಜನರನ್ನು ಹಣಕಾಸಿನ ವಿಚಾರದಲ್ಲಿ ಸಶಕ್ತಗೊಳಿಸುತ್ತಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕಂಪನಿಯು ಈಗ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 108 ಶಾಖೆಗಳನ್ನು ಹೊಂದಿದೆ. ಇಬ್ಬರು ನೌಕರರೊಂದಿಗೆ ಆರಂಭವಾದ ಕಂಪನಿಯು ಈಗ 4,300 ನೌಕರರನ್ನು ಹಾಗೂ 60 ಲಕ್ಷಕ್ಕೂ ಹೆಚ್ಚು ಚಂದಾದಾರನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.