ADVERTISEMENT

ರಿಲಯನ್ಸ್‌ ಸೇರಿದಂತೆ 5 ಕಂಪನಿಗಳ ಎಂ–ಕ್ಯಾಪ್ ₹2.23 ಲಕ್ಷ ಕೋಟಿ ಇಳಿಕೆ

ಪಿಟಿಐ
Published 17 ಮಾರ್ಚ್ 2024, 15:42 IST
Last Updated 17 ಮಾರ್ಚ್ 2024, 15:42 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌    

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ ಐದು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಕಳೆದ ವಾರ ₹2.23 ಲಕ್ಷ ಕೋಟಿಯಷ್ಟು ಕರಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಎಂ–ಕ್ಯಾಪ್‌ ಹೆಚ್ಚು ಇಳಿಕೆ ಕಂಡಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ₹81,763 ಕೋಟಿ, ಎಲ್‌ಐಸಿ ₹63,629 ಕೋಟಿ, ಎಸ್‌ಬಿಐ ₹50,111 ಕೋಟಿ, ಹಿಂದುಸ್ತಾನ್‌ ಯೂನಿಲಿವರ್‌ ₹21,792 ಕೋಟಿ ಮತ್ತು ಐಸಿಐಸಿಐ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು ₹6,363 ಕೋಟಿ ಇಳಿಕೆಯಾಗಿದೆ. 

ಟಿಸಿಎಸ್‌ ₹38,858 ಕೋಟಿ, ಭಾರ್ತಿ ಏರ್‌ಟೆಲ್ ₹11,976 ಕೋಟಿ, ಐಟಿಸಿ ₹7,738 ಕೋಟಿ, ಇನ್ಫೊಸಿಸ್‌ ₹7,450 ಕೋಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ₹4,443 ಕೋಟಿ ಮಾರುಕಟ್ಟೆ ಮೌಲ್ಯ ಕೋಟಿ ಗಳಿಸಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.