ನವದೆಹಲಿ: ಕಳೆದ ವಾರದ ಷೇರು ವಹಿವಾಟಿನಲ್ಲಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹1.30 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮಾರುಕಟ್ಟೆ ಮೌಲ್ಯಕ್ಕೆ ₹45,158 ಕೋಟಿ ಸೇರ್ಪಡೆಯಾಗಿದೆ. ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್ ₹7.15 ಲಕ್ಷ ಕೋಟಿಗೆ ಮುಟ್ಟಿದೆ.
ಐಸಿಐಸಿಐ ಬ್ಯಾಂಕ್ ₹28,726 ಕೋಟಿ, ಭಾರ್ತಿ ಏರ್‌ಟೆಲ್ ₹20,747 ಕೋಟಿ, ಐಟಿಸಿ ₹18,914 ಕೋಟಿ, ಎಲ್‌ಐಸಿ ₹9,487 ಕೋಟಿ ಮತ್ತು ಇನ್ಫೊಸಿಸ್ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹7,699 ಕೋಟಿ ಸೇರ್ಪಡೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ₹26,115 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್ ₹16,371 ಕೋಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ₹5,282 ಕೋಟಿ ಮತ್ತು ಹಿಂದುಸ್ತಾನ್ ಯೂನಿಲಿವರ್ ಕಂಪನಿಯ ಎಂ–ಕ್ಯಾಪ್ ₹2,525 ಕೋಟಿ ಇಳಿಕೆಯಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 641 ಅಂಶ (ಶೇ 0.87ರಷ್ಟು) ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.