ADVERTISEMENT

ಷೇರು ಮಾರುಕಟ್ಟೆ: ಸೆನ್ಸೆಕ್ಸ್‌ 611 ಅಂಶ ಏರಿಕೆ

ಪಿಟಿಐ
Published 26 ಆಗಸ್ಟ್ 2024, 13:46 IST
Last Updated 26 ಆಗಸ್ಟ್ 2024, 13:46 IST
Sensex
Sensex   

ಮುಂಬೈ: ಲೋಹ, ಐ.ಟಿ ಮತ್ತು ಗ್ರಾಹಕ ವಸ್ತುಗಳ ಷೇರುಗಳ ಖರೀದಿ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಸೋಮವಾರ ಏರಿಕೆಯಾದವು.

ಅಮೆರಿಕದ ಫೆಡರಲ್‌ ರಿಸರ್ವ್‌ ಶೀಘ್ರದಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಮತ್ತು ವಿದೇಶಿ ಬಂಡವಾಳ ಒಳಹರಿವಿನ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಜಿಗಿತ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 611 ಅಂಶ ಏರಿಕೆಯಾಗಿ, 81,698ಕ್ಕೆ ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 187 ಅಂಶ ಹೆಚ್ಚಳವಾಗಿ 25,010ಗೆ ಸ್ಥಿರಗೊಂಡಿತು.

ADVERTISEMENT

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎನ್‌ಟಿಪಿಸಿ, ಬಜಾಜ್‌ ಫಿನ್‌ಸರ್ವ್‌, ಟೆಕ್‌ ಮಹೀಂದ್ರ, ಜೆಎಸ್‌ಡಬ್ಲ್ಯು ಸ್ಟೀಲ್‌, ಟೈಟನ್, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಸ್ಟೀಲ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಮತ್ತು ಟಿಸಿಎಸ್‌ ಷೇರುಗಳ ಮೌಲ್ಯ ಏರಿಕೆಯಾಗಿದೆ.

ಕೋಟಕ್‌ ಮಹೀಂದ್ರ ಬ್ಯಾಂಕ್‌, ಪೇಟಿಎಂ, ಇಂಡಸ್‌ಇಂಡ್‌ ಬ್ಯಾಂಕ್, ಮಾರುತಿ ಮತ್ತು ಹಿಂದುಸ್ತಾನ್‌ ಯುನಿಲಿವರ್‌ ಷೇರಿನ ಮೌಲ್ಯ ಇಳಿದಿದೆ. ಏಷ್ಯನ್‌ ಮಾರುಕಟ್ಟೆಯಲ್ಲಿ ಶಾಂಘೈ, ಹಾಂಗ್‌ಕಾಂಗ್‌ ಸಕಾರಾತ್ಮಕ ವಹಿವಾಟು ನಡೆಸಿದ್ದರೆ, ಸೋಲ್‌ ಮತ್ತು ಟೋಕಿಯೊ ಇಳಿಕೆ ದಾಖಲಿಸಿವೆ.

ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ ಶೇ 1ರಷ್ಟು ಏರಿಕೆಯಾಗಿದ್ದು, 79.87 ಡಾಲರ್‌ಗೆ (₹6,698) ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.