ADVERTISEMENT

ಷೇರು ಸೂಚ್ಯಂಕಗಳು ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:30 IST
Last Updated 16 ಫೆಬ್ರುವರಿ 2024, 15:30 IST
<div class="paragraphs"><p>ಷೇರು ಪೇಟೆ  </p></div>

ಷೇರು ಪೇಟೆ

   

ಮುಂಬೈ: ಆಟೊ ಮತ್ತು ಐ.ಟಿ ಕಂಪನಿಗಳ ಷೇರುಗಳು ಗಳಿಕೆ ಕಂಡಿದ್ದರಿಂದ ಷೇರು ಸೂಚ್ಯಂಕಗಳು ಶುಕ್ರವಾರ ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 376 ಅಂಶ ಏರಿಕೆಯಾಗಿ, 72,426ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 129 ಅಂಶ ಹೆಚ್ಚಳವಾಗಿ 22,040ಕ್ಕೆ ವಹಿವಾಟನ್ನು ಅಂತ್ಯಗೊಳಿಸಿತು.

ADVERTISEMENT

ವಿಪ್ರೊ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಮೋಟರ್ಸ್‌, ಮಾರುತಿ, ಇನ್ಫೊಸಿಸ್‌, ನೆಸ್ಟ್ಲೆ ಇಂಡಿಯಾ, ಇಂಡಸ್‌ಇಂಡ್‌ ಷೇರುಗಳು ಗಳಿಕೆ ಕಂಡಿವೆ. ಪವರ್‌ ಗ್ರಿಡ್‌, ಎಸ್‌ಬಿಐ, ರಿಲಯನ್ಸ್‌, ಎನ್‌ಟಿಪಿಸಿ ಮತ್ತು ಆಕ್ಸಿಸ್‌ ಬ್ಯಾಂಕ್‌ನ ಷೇರುಗಳು ಇಳಿಕೆ ಕಂಡಿವೆ. 

ಪೇಟಿಎಂ ಷೇರು ಶೇ 5ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹341.50 ಮತ್ತು ₹341.30ಕ್ಕೆ ತಲುಪಿದೆ.

ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82.17 ಡಾಲರ್‌ಗೆ ಮುಟ್ಟಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.