ADVERTISEMENT

ಲಾಭ ಗಳಿಕೆ ಒತ್ತಡ: ಷೇರು ಸಂವೇದಿ ಸೂಚ್ಯಂಕ ಇಳಿಕೆ

ಪಿಟಿಐ
Published 29 ಜುಲೈ 2020, 14:12 IST
Last Updated 29 ಜುಲೈ 2020, 14:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಲಾಭ ಗಳಿಕೆಯ ವಹಿವಾಟಿಗೆಒಳಗಾಗಿದ್ದ ಪರಿಣಾಮವಾಗಿ, ಬುಧವಾರ ಷೇರುಪೇಟೆಗಳ ವಹಿವಾಟು ನಕಾರಾತ್ಮಕವಾಗಿ ಅಂತ್ಯಗೊಂಡಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು 421 ಅಂಶ ಇಳಿಕೆಯಾಗಿ 38,071 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 98 ಅಂಶ ಇಳಿಕೆ ಕಂಡು 11,202 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇಕಡ 3.75ರಷ್ಟು ಗರಿಷ್ಠ ನಷ್ಟ ಅನುಭವಿಸಿದೆ. ನೆಸ್ಲೆ ಇಂಡಿಯಾ, ಎಚ್‌ಸಿಎಲ್‌ ಟೆಕ್‌, ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಾರುತಿ ಮತ್ತು ಟೆಕ್‌ ಮಹೀಂದ್ರಾ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.

ADVERTISEMENT

ಗಳಿಕೆ: ಇಂಡಸ್‌ಇಂಡ್‌ ಬ್ಯಾಂಕ್, ಟಾಟಾ ಸ್ಟೀಲ್‌, ಸನ್‌ ಫಾರ್ಮಾ, ಬಜಾಜ್‌ ಫೈನಾನ್ಸ್‌, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಎಲ್‌ಆ್ಯಂಡ್‌ಟಿ ಕಂಪನಿಗಳ ಷೇರುಗಳ ಬೆಲೆ ಶೇ 4.54ರವರೆಗೂ ಏರಿಕೆಯಾಗಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೇಡರಲ್‌ ರಿಸರ್ವ್‌ ಸಭೆಯತ್ತ ಹೂಡಿಕೆದಾರರು ಗಮನ ಹರಿಸಿದ್ದಾರೆ. ಇದು ಸಹ ವಹಿವಾಟು ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ದೇಶದಲ್ಲಿ ಕೋವಿಡ್–19‌ ಪ್ರಕರಣಗಳ ಸಂಖ್ಯೆಯಲ್ಲಿ ಆಗುತ್ತಿರುವ ಏರಿಕೆಯೂ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

‘ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಬಳಿಕ ನಿರ್ದಿಷ್ಟ ಷೇರುಗಳು ಲಾಭ ಗಳಿಕೆ ವಹಿವಾಟಿಗೆ ಒಳಗಾಗಿವೆ. ಇದು ನಿರೀಕ್ಷಿತವೇ ಆಗಿದ್ದು, ಈ ಪ್ರವೃತ್ತಿಯು ಮುಂದುವರಿಯಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ವಹಿವಾಟಿನ ವಿವರ

0.68% -ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಶ್ರೇಣಿ ಸೂಚ್ಯಂಕಗಳ ಏರಿಕೆ

1.28% -ಬ್ರೆಂಟ್‌ ತೈಲ ದರ ಏರಿಕೆ

ಅಲ್ಟ್ರಾಟೆಕ್‌ ಸಿಮೆಂಟ್‌;1.8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.