ADVERTISEMENT

ಮಾರುತಿ ಸುಜುಕಿ: ತಗ್ಗಿದ ಮಾರುಕಟ್ಟೆ ಪಾಲು

ಪಿಟಿಐ
Published 7 ಮಾರ್ಚ್ 2023, 20:46 IST
Last Updated 7 ಮಾರ್ಚ್ 2023, 20:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ ಮಾರುತಿ ಸುಜುಕಿ ಹಾಗೂ ಹುಂಡೈ ಕಂಪನಿಗಳ ಶೇಕಡಾವಾರು ಪಾಲು ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಟಾಟಾ ಮೋಟರ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಕಿಯಾ ಕಂಪನಿಗಳ ಪಾಲು ಹೆಚ್ಚಾಗಿದೆ.

ಆಟೊಮೊಬೈಲ್ ಡೀಲರ್‌ ಸಂಘಗಳ ಒಕ್ಕೂಟ (ಎಫ್‌ಎಡಿಎ) ಸಂಗ್ರಹಿಸಿರುವ ಅಂಕಿ–ಅಂಶಗಳ ಪ್ರಕಾರ, ಈ ವರ್ಷದ ಫೆಬ್ರುವರಿಯಲ್ಲಿ ಮಾರುತಿ ಸುಜುಕಿ ಕಂಪನಿಯ ರಿಟೇಲ್ ಮಾರಾಟವು 1.18 ಲಕ್ಷ ವಾಹನಗಳು. ಇದು ಹಿಂದಿನ ವರ್ಷದ ಇದೇ ತಿಂಗಳಲ್ಲಿ ಆಗಿದ್ದ 1.09 ಲಕ್ಷ ವಾಹನಗಳ ಮಾರಾಟಕ್ಕಿಂತ ಹೆಚ್ಚು.

ಆದರೆ, ಮಾರುಕಟ್ಟೆ ಪಾಲಿನ ಲೆಕ್ಕಾಚಾರದಲ್ಲಿ ಮಾರುತಿ ಸುಜುಕಿ ಪಾಲು ತಗ್ಗಿದೆ. ಈ ವರ್ಷದ ಫೆಬ್ರುವರಿಯಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಶೇಕಡ 41.40ಕ್ಕೆ ಇಳಿಕೆ ಆಗಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಇದು ಶೇ 42.36ರಷ್ಟು ಇತ್ತು.

ADVERTISEMENT

ದೇಶದ ಒಟ್ಟು 1,434 ಪ್ರಾದೇಶಿಕ ಸಾರಿಗೆ ಕಚೇರಿಗಳ ಪೈಕಿ 1,348 ಕಚೇರಿಗಳಿಂದ ಮಾಹಿತಿಯನ್ನು ಸಂಗ್ರಹ ಮಾಡಿರುವುದಾಗಿ ಎಫ್‌ಎಡಿಎ ಹೇಳಿದೆ.

ಕಂಪನಿ;ಮಾರುಕಟ್ಟೆ ಪಾಲು

–;2022ರ ಫೆಬ್ರುವರಿ;2023ರ ಫೆಬ್ರುವರಿ

ಹುಂಡೈ ಮೋಟರ್ ಇಂಡಿಯಾ;14.95%;13.62%

ಟಾಟಾ ಮೋಟರ್ಸ್;13.16%;13.57%

ಮಹೀಂದ್ರ ಆ್ಯಂಡ್ ಮಹೀಂದ್ರ;7.06%;10.22%

ಕಿಯಾ ಇಂಡಿಯಾ;5.27%;6.81%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.