ADVERTISEMENT

ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

ಪಿಟಿಐ
Published 1 ಜುಲೈ 2023, 15:46 IST
Last Updated 1 ಜುಲೈ 2023, 15:46 IST
ಮಾರುತಿ ಸುಜುಕಿ ಇಂಡಿಯಾ
ಮಾರುತಿ ಸುಜುಕಿ ಇಂಡಿಯಾ    

ನವದೆಹಲಿ: ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2023ರ ಮೊದಲಾರ್ಧದಲ್ಲಿ  (ಜನವರಿ–ಜೂನ್‌) ಇದೇ ಮೊದಲ ಬಾರಿಗೆ 20 ಲಕ್ಷ ದಾಟಿದೆ.

2022ರ ಜನವರಿ–ಜೂನ್ ಅವಧಿಯಲ್ಲಿ 18.31 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಇದಕ್ಕೆ ಹೋಲಿಸಿದರೆ 2023ರ ಮೊದಲಾರ್ಧದಲ್ಲಿ ಶೇ 10ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಈ ಅವಧಿಯಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರಾಟವು 7.87 ಲಕ್ಷದಿಂದ 8.61 ಲಕ್ಷಕ್ಕೆ ಏರಿಕೆ ಕಂಡಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಏಪ‍್ರಿಲ್‌–ಜೂನ್‌ ಕಂಪನಿಯ ಎಸ್‌ಯುವಿ ಮಾರುಕಟ್ಟೆಯು ಶೇ 21ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಅವಧಿಯಲ್ಲಿ ಶೇ 8.5ರಷ್ಟು ಬೆಳವಣಿಗೆ ಕಂಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂನ್‌ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಮಾರುತಿ ಮತ್ತು ಹುಂಡೈ ಕಂಪನಿಗಳು ಒಂದಂಕಿ ಪ್ರಗತಿ ಕಂಡಿವೆ. ಟೊಯೋಟ ಮತ್ತು ಎಂಜಿ ಮೋಟರ್‌ ಕಂಪನಿಗಳು ಎರಡಂಕಿ ಪ್ರಗತಿ ಸಾಧಿಸಿವೆ. ಆದರೆ ಕಿಯಾ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.

ಒಟ್ಟಾರೆಯಾಗಿ ಜೂನ್‌ನಲ್ಲಿ 3.27 ಲಕ್ಷ  ಪ್ರಯಾಣಿಕ ವಾಹನಗಳು ‌ಮಾರಾಟ ಆಗಿದ್ದು, ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಶೇ 1.9ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.