ADVERTISEMENT

ತೆರೆಯದ ಏರ್‌ಬ್ಯಾಗ್‌: ಕಾರು ಖರೀದಿ ದರ ಮರು‍ಪಾವತಿಗೆ ಆದೇಶ

ಪಿಟಿಐ
Published 6 ಫೆಬ್ರುವರಿ 2024, 15:35 IST
Last Updated 6 ಫೆಬ್ರುವರಿ 2024, 15:35 IST
ಮಾರುತಿ ಸುಜುಕಿ ಇಂಡಿಯಾ
ಮಾರುತಿ ಸುಜುಕಿ ಇಂಡಿಯಾ    

ಮಲಪ್ಪುರಂ: ಅಪಘಾತ ಸಂಭವಿಸಿದ ವೇಳೆ ಏರ್‌ಬ್ಯಾಗ್‌ ತೆರೆಯದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ಕಾರಿನ ಮಾಲೀಕನಿಗೆ, ಆ ಕಾರು ಖರೀದಿಸಿದ ಸಂಪೂರ್ಣ ಹಣವನ್ನು ಮರುಪಾವತಿಸುವಂತೆ ಕೇರಳದ ಮಲಪ್ಪುರಂ ಜಿಲ್ಲಾ ಗ್ರಾಹಕರ ಆಯೋಗವು, ಮಾರುತಿ ಸುಜುಕಿ ಇಂಡಿಯಾ ಕಂಪನಿಗೆ ಸೂಚಿಸಿದೆ. 

ಇಂಡಿಯಾನೂರ್‌ ನಿವಾಸಿ ಮಹಮ್ಮದ್ ಮುಸ್ಲಿಯಾರ್ ಎಂಬುವರು ಖರೀದಿಸಿದ್ದ ಮಾರುತಿ ಸುಜುಕಿಯ ಕಾರು 2021ರ ಜೂನ್‌ 30ರಂದು ಅಪಘಾತಕ್ಕೀಡಾಗಿತ್ತು. 

ಏರ್‌ಬ್ಯಾಗ್‌ ತೆರೆದುಕೊಳ್ಳದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕಾರಿಗೂ ಹೆಚ್ಚಿನ ಹಾನಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಸಾರಿಗೆ ವಾಹನ ನಿರೀಕ್ಷಕರು ಕೂಡ, ಏರ್‌ಬ್ಯಾಗ್‌ ತೆರೆದುಕೊಳ್ಳದಿರುವ ಬಗ್ಗೆ ವರದಿ ಸಲ್ಲಿಸಿದ್ದರು. 

ADVERTISEMENT

ವಿಚಾರಣೆ ನಡೆಸಿದ ಆಯೋಗವು, ‘ಒಂದು ತಿಂಗಳೊಳಗೆ ಸಂತ್ರಸ್ತರಿಗೆ ಕಾರಿನ ಬೆಲೆ ₹4,35,854 ಮತ್ತು ದೂರಿನ ಖರ್ಚಾಗಿ ₹20 ಸಾವಿರ ಪಾವತಿಸಬೇಕು. ತಪ್ಪಿದರೆ ಶೇ 9ರಷ್ಟು ಬಡ್ಡಿ ಸೇರಿಸಿ ನೀಡಬೇಕಿದೆ’ ಎಂದು ಆದೇಶಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.