ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023–24ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹3,877 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ರ ಇದೇ ಅವಧಿಯಲ್ಲಿ ₹2,623 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಈಗ ಶೇ 47.8ರಷ್ಟು ಏರಿಕೆಯಾಗಿದೆ. ಹೆಚ್ಚಿದ ವಾಹನಗಳ ಮಾರಾಟದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.
ಮೊದಲ ಬಾರಿಗೆ 2023–24ರ ಆರ್ಥಿಕ ವರ್ಷದಲ್ಲಿ ಕಂಪನಿಯ ವಾಹನಗಳ ಒಟ್ಟು ಮಾರಾಟವು 20 ಲಕ್ಷ ದಾಟಿದೆ. ಸತತ ಮೂರನೇ ವರ್ಷವೂ ಕಂಪನಿ ಅಗ್ರ ರಫ್ತುಗಾರನಾಗಿ ಮುಂದುವರಿದಿದೆ. ದೇಶದ ಒಟ್ಟು ಪ್ರಯಾಣಿಕ ವಾಹನದ ರಫ್ತಿನಲ್ಲಿ ಕಂಪನಿ ಶೇ 41.8ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದೆ.
ಬಿಎಸ್‌ಇಯಲ್ಲಿ ಮಾರುತಿ ಸುಜುಕಿಯ ಪ್ರತಿ ಷೇರಿನ ಬೆಲೆ ₹12,687ಕ್ಕೆ ಮುಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.