ADVERTISEMENT

2022 | ಜನವರಿಯಿಂದ ಕಾರ್‌ ಬೆಲೆ ಹೆಚ್ಚಳ: ಮಾರುತಿ

ಪಿಟಿಐ
Published 2 ಡಿಸೆಂಬರ್ 2021, 10:42 IST
Last Updated 2 ಡಿಸೆಂಬರ್ 2021, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ಜನವರಿ ತಿಂಗಳಿನಿಂದ ತನ್ನ ಎಲ್ಲ ಕಾರುಗಳ ಬೆಲೆ ಹೆಚ್ಚಿಸುವ ಆಲೋಚನೆ ನಡೆಸುತ್ತಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಗುರುವಾರ ಹೇಳಿದೆ.

ಬೆಲೆ ಏರಿಕೆಯ ಪ್ರಮಾಣದಲ್ಲಿ ಮಾದರಿಯಿಂದ ಮಾದರಿಗೆ ವ್ಯತ್ಯಾಸ ಇರಲಿದೆ ಎಂದು ಅದು ತಿಳಿಸಿದೆ.

ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ಕಂಪನಿಯ ವಾಹನದ ಬೆಲೆಯ ಮೇಲೆ ಪರಿಣಾಮ ಉಂಟಾಗಿದೆ.

ADVERTISEMENT

ಹೀಗಾಗಿ ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿಯ ಷೇರುಪೇಟೆಗೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.