ನವದೆಹಲಿ: ಮಾರುತಿ ಸುಜುಕಿ ಕಂಪನಿಯು ತನ್ನ ವಿವಿಧ ಮಾದರಿಗಳ ಒಟ್ಟು 17,362 ಕಾರುಗಳನ್ನು ಹಿಂದಕ್ಕೆ ಪಡೆದು, ಅವುಗಳ ಏರ್‌ಬ್ಯಾಗ್ ನಿಯಂತ್ರಕ ವ್ಯವಸ್ಥೆಯಲ್ಲಿ ದೋಷ ಇದೆಯೇ ಎಂಬುದನ್ನು ಪರಿಶೀಲಿಸಲಿದೆ. ದೋಷ ಇದ್ದಲ್ಲಿ ಅದನ್ನು ಬದಲಿಸಿ ಕೊಡಲಿದೆ.
2022ರ ಡಿಸೆಂಬರ್ 8ರಿಂದ ಈ ವರ್ಷದ ಜನವರಿ 12ರವರೆಗೆ ತಯಾರಾದ ಆಲ್ಟೊ ಕೆ10, ಎಸ್–ಪ್ರೆಸೊ, ಇಕೊ, ಬ್ರೆಜಾ, ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾ ಮಾದರಿಗಳನ್ನು ಕಂಪನಿಯು ಹಿಂದಕ್ಕೆ ಪಡೆದು, ಲೋಪವನ್ನು ಪರಿಶೀಲಿಸಲಿದೆ. ಈ ವಿಚಾರವನ್ನು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಲೋಪ ಕಂಡುಬಂದಲ್ಲಿ ಅದನ್ನು ಕಂಪನಿಯು ಉಚಿತವಾಗಿ ಬದಲಿಸಿ ಕೊಡಲಿದೆ. ‘ಏರ್‌ಬ್ಯಾಗ್ ನಿಯಂತ್ರಕ ವ್ಯವಸ್ಥೆಯಲ್ಲಿ ಲೋಪ ಇರುವ ಸಾಧ್ಯತೆ ಇದೆ ಎಂಬ ಅನುಮಾನವಿದೆ’ ಎಂದು ಅದು ತಿಳಿಸಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ, ಲೋಪ ಸರಿಪಡಿಸುವವರೆಗೆ ವಾಹನ ಮಾಲೀಕರು ಕಾರು ಚಲಾಯಿಸಬಾರದು ಎಂದು ಕಂಪನಿ ಸಲಹೆ ನೀಡಿದೆ. ವಾಹನ ಮಾಲೀಕರಿಗೆ ಮಾರುತಿ ಸುಜುಕಿ ಕಡೆಯಿಂದ ಸಂದೇಶ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.