ADVERTISEMENT

ಎಂ–ಕ್ಯಾಪ್‌: ₹1.55 ಲಕ್ಷ ಕೋಟಿ ಸೇರ್ಪಡೆ

ಪಿಟಿಐ
Published 24 ನವೆಂಬರ್ 2024, 14:00 IST
Last Updated 24 ನವೆಂಬರ್ 2024, 14:00 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಏರಿಕೆಯಿಂದಾಗಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ (ಎಂ–ಕ್ಯಾಪ್‌) ₹1.55 ಲಕ್ಷ ಕೋಟಿ ಸೇರ್ಪಡೆಯಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ ₹40,392 ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಎಂ–ಕ್ಯಾಪ್‌ ₹13.34 ಲಕ್ಷ ಕೋಟಿ ಆಗಿದೆ.

ADVERTISEMENT

ಟಿಸಿಎಸ್‌ ₹36,036 ಕೋಟಿ, ಐಸಿಐಸಿಐ ಬ್ಯಾಂಕ್ ₹16,266 ಕೋಟಿ, ಇನ್ಫೊಸಿಸ್‌ ₹16,189 ಕೋಟಿ, ಹಿಂದುಸ್ತಾನ್‌ ಯೂನಿಲಿವರ್‌ ₹13,239 ಕೋಟಿ, ಐಟಿಸಿ ₹11,508 ಕೋಟಿ, ಭಾರ್ತಿ ಏರ್‌ಟೆಲ್‌ ₹11,260 ಕೋಟಿ ಮತ್ತು ಎಸ್‌ಬಿಐ ಎಂ–ಕ್ಯಾಪ್‌ಗೆ ₹10,709 ಕೋಟಿ ಸೇರ್ಪಡೆಯಾಗಿದೆ.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ₹11,954 ಕೋಟಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಎಂ–ಕ್ಯಾಪ್‌ ಮೌಲ್ಯ ₹2,368 ಕೋಟಿ ಕರಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.