ನವದೆಹಲಿ: ಕಳೆದ ವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 1,341 ಅಂಶ (ಶೇ1.84) ಹೆಚ್ಚಳವಾಗಿದೆ.
ಇದರಿಂದ ಪ್ರಮುಖ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ₹1.47 ಲಕ್ಷ ಕೋಟಿಯಷ್ಟು ಏರಿಕೆ ಆಗಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮಾರುಕಟ್ಟೆ ಮೌಲ್ಯಕ್ಕೆ ₹40,163 ಕೋಟಿ ಸೇರ್ಪಡೆ ಆಗಿದ್ದು, ಒಟ್ಟು ಎಂ–ಕ್ಯಾಪ್ ₹6.16 ಲಕ್ಷ ಕೋಟಿಗೆ ಏರಿಕೆ ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ₹36,467 ಕೋಟಿ, ಭಾರ್ತಿ ಏರ್ಟೆಲ್ ₹26,492 ಕೋಟಿ, ಎಚ್ಡಿಎಫ್ಸಿ ಬ್ಯಾಂಕ್ ₹21,136 ಕೋಟಿ, ಐಸಿಐಸಿಐ ಬ್ಯಾಂಕ್ ₹9,570 ಕೋಟಿ ಮತ್ತು ಇನ್ಫೊಸಿಸ್ ₹7,815 ಕೋಟಿ, ಐಟಿಸಿ ₹4,057 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯ ₹2,231 ಕೋಟಿ ಹೆಚ್ಚಳವಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ₹16,588 ಕೋಟಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ₹6,978 ಕೋಟಿ ಮಾರುಕಟ್ಟೆ ಮೌಲ್ಯ ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.