ADVERTISEMENT

ಷೇರು ಸೂಚ್ಯಂಕ ಇಳಿಕೆ: ಮಾರುಕಟ್ಟೆ ಬಂಡವಾಳ ₹2 ಲಕ್ಷ ಕೋಟಿ ಇಳಿಕೆ

ಪಿಟಿಐ
Published 27 ಅಕ್ಟೋಬರ್ 2024, 14:05 IST
Last Updated 27 ಅಕ್ಟೋಬರ್ 2024, 14:05 IST
<div class="paragraphs"><p>ಷೇರು ಮಾರುಕಟ್ಟೆ</p></div>

ಷೇರು ಮಾರುಕಟ್ಟೆ

   

ನವದೆಹಲಿ: ಕಳೆದ ವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿದ್ದರಿಂದ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಮಾರುಕಟ್ಟೆ ಬಂಡವಾಳವು (ಎಂ–ಕ್ಯಾಪ್‌) ₹2.09 ಲಕ್ಷ ಕೋಟಿ ಕರಗಿದೆ.

ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹44,195 ಕೋಟಿ ಕರಗಿದ್ದು, ಒಟ್ಟು ಎಂ–ಕ್ಯಾಪ್‌ ₹5.93 ಲಕ್ಷ ಕೋಟಿಗೆ ಇಳಿದಿದೆ.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ ₹41,994 ಕೋಟಿ, ಎಸ್‌ಬಿಐ ₹35,117 ಕೋಟಿ, ಭಾರ್ತಿ ಏರ್‌ಟೆಲ್‌ ₹24,108 ಕೋಟಿ, ಟಿಸಿಎಸ್ ₹23,137 ಕೋಟಿ, ಎಲ್‌ಐಸಿ ₹19,797 ಕೋಟಿ, ಇನ್ಪೊಸಿಸ್‌ ₹10,629 ಕೋಟಿ, ಐಟಿಸಿ ₹5,690 ಕೋಟಿ ಮತ್ತು ಐಸಿಐಸಿಐ ಬ್ಯಾಂಕ್‌ನ ಮಾರುಕಟ್ಟೆ ಬಂಡವಾಳ ₹5,280 ಕೋಟಿ ಇಳಿದಿದೆ. 

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ ₹46,891 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹13.29 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.