ನವದೆಹಲಿ: ಕಳೆದ ವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಇಳಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹4.74 ಲಕ್ಷ ಕೋಟಿ ಕರಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಎಂ–ಕ್ಯಾಪ್ ಅತಿಹೆಚ್ಚು ಕರಗಿದ್ದು, ₹1.88 ಲಕ್ಷ ಕೋಟಿ ಕಡಿಮೆಯಾಗಿದೆ. ಒಟ್ಟು ಮಾರುಕಟ್ಟೆ ಮೌಲ್ಯ ₹18.76 ಲಕ್ಷ ಕೋಟಿ ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ₹72,919 ಕೋಟಿ, ಭಾರ್ತಿ ಏರ್‌ಟೆಲ್ ₹53,800 ಕೋಟಿ, ಐಸಿಐಸಿಐ ಬ್ಯಾಂಕ್ ₹47,461 ಕೋಟಿ, ಎಲ್‌ಐಸಿ ₹33,490 ಕೋಟಿ, ಹಿಂದುಸ್ತಾನ್ ಯೂನಿಲಿವರ್ ₹27,525 ಕೋಟಿ, ಐಟಿಸಿ ₹24,139 ಕೋಟಿ, ಟಿಸಿಎಸ್ ₹21,690 ಕೋಟಿ ಮತ್ತು ಎಸ್‌ಬಿಐ ಮಾರುಕಟ್ಟೆ ಮೌಲ್ಯವು ₹5,339 ಕೋಟಿ ಕರಗಿದೆ.
ಇನ್ಫೊಸಿಸ್ ಎಂ–ಕ್ಯಾಪ್‌ನಲ್ಲಿ ₹4,629 ಕೋಟಿ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.