ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್) ಕಳೆದ ವಾರ ₹2.26 ಲಕ್ಷ ಕೋಟಿಯಷ್ಟು ಗಳಿಕೆ ಕಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಮತ್ತು ಇನ್ಪೊಸಿಸ್ ಹೆಚ್ಚು ಗಳಿಕೆ ಕಂಡಿವೆ.
ಟಿಸಿಎಸ್ ಮಾರುಕಟ್ಟೆ ಮೌಲ್ಯ ₹85,493 ಕೋಟಿ, ಇನ್ಪೊಸಿಸ್ ₹36,793 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ₹30,700 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ₹26,386 ಕೋಟಿ, ಐಸಿಐಸಿಐ ಬ್ಯಾಂಕ್ ₹18,493 ಕೋಟಿ, ಎಲ್‌ಐಸಿ ₹14,294 ಕೋಟಿ, ಐಟಿಸಿ ₹11,412 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್ ₹2,428 ಮತ್ತು ಹಿಂದೂಸ್ತಾನ್ ಯೂನಿಲಿವರ್ ₹387 ಕೋಟಿ ಗಳಿಕೆ ಕಂಡಿವೆ.
ಭಾರ್ತಿ ಏರ್‌ಟೆಲ್ ಮೌಲ್ಯ ₹3,654 ಕೋಟಿಯಷ್ಟು ಇಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಗರಿಷ್ಠ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಪೊಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಸ್‌ಬಿಐ, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಐಟಿಸಿ ಇವೆ.
ಕಳೆದ ವಾರ ಬಿಎಸ್‌ಇ 1,658 ಅಂಶ ಏರಿಕೆ ಆಗಿತ್ತು. 30 ಷೇರುಗಳ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಶುಕ್ರವಾರ 969 ಅಂಶ ಏರಿಕೆಯಾಗಿ 71,483ಕ್ಕೆ ತಲುಪಿತ್ತು. ದಿನದ ವಹಿವಾಟಿನಲ್ಲಿ ಈ ಅಂಶ 1,091ಕ್ಕೆ ಹೆಚ್ಚಳವಾಗಿ, 71,605 ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.