ADVERTISEMENT

9 ಕಂಪನಿಗಳ ಎಂ–ಕ್ಯಾಪ್‌ ಏರಿಕೆ

ಪಿಟಿಐ
Published 30 ಜೂನ್ 2024, 13:48 IST
Last Updated 30 ಜೂನ್ 2024, 13:48 IST
,,,,,,
,,,,,,   

ನವದೆಹಲಿ: ಕಳೆದ ವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಏರಿಕೆ ಕಂಡಿದ್ದರಿಂದ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹2.89 ಲಕ್ಷ ಕೋಟಿ ಸೇರ್ಪಡೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯಕ್ಕೆ ₹1.52 ಲಕ್ಷ ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಎಂ–ಕ್ಯಾಪ್‌ ₹21.18 ಲಕ್ಷ ಕೋಟಿಗೆ ಮುಟ್ಟಿದೆ. ಟಿಸಿಎಸ್‌ ₹34,733 ಕೋಟಿ, ಐಸಿಐಸಿಐ ಬ್ಯಾಂಕ್‌ ₹30,286 ಕೋಟಿ, ಭಾರ್ತಿ ಏರ್‌ಟೆಲ್‌ ₹18,267 ಕೋಟಿ, ಇನ್ಫೊಸಿಸ್‌ ₹14,656 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ₹13,808 ಕೋಟಿ, ಎಸ್‌ಬಿಐ ₹11,111 ಕೋಟಿ, ಹಿಂದುಸ್ತಾನ್‌ ಯೂನಿಲಿವರ್‌ ₹7,953 ಕೋಟಿ ಮತ್ತು ಐಟಿಸಿ ಮಾರುಕಟ್ಟೆ ಮೌಲ್ಯಕ್ಕೆ ₹6,616 ಕೋಟಿ ಸೇರ್ಪಡೆಯಾಗಿದೆ. 

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಎಂ–ಕ್ಯಾಪ್‌ ₹22,042 ಕೋಟಿ ಇಳಿಕೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.