ADVERTISEMENT

9 ಕಂಪನಿಗಳ ಎಂಕ್ಯಾಪ್‌ ಮೌಲ್ಯ ₹1.30 ಲಕ್ಷ ಕೋಟಿಯಷ್ಟು ಏರಿಕೆ

ಪಿಟಿಐ
Published 3 ಡಿಸೆಂಬರ್ 2023, 14:48 IST
Last Updated 3 ಡಿಸೆಂಬರ್ 2023, 14:48 IST
ಭಾರ್ತಿ ಏರ್‌ಟೆಲ್‌
ಭಾರ್ತಿ ಏರ್‌ಟೆಲ್‌   

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂಕ್ಯಾಪ್‌) ಕಳೆದ ವಾರ ₹1.30 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ.

ಭಾರ್ತಿ ಏರ್‌ಟೆಲ್‌ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಹೆಚ್ಚು ಗಳಿಸಿವೆ.

ಭಾರ್ತಿ ಏರ್‌ಟೆಲ್‌ ಮೌಲ್ಯ ₹23,746 ಕೋಟಿ, ಟಿಸಿಎಸ್‌ ₹19,027 ಕೋಟಿ, ಎಚ್‌ಡಿಎಫ್‌ಸಿ ₹17,881 ಕೋಟಿ, ಐಟಿಸಿ ₹15,159 ಕೋಟಿ, ಬಜಾಜ್‌ ಫೈನಾನ್ಸ್‌ ₹14,480 ಕೋಟಿ, ಐಸಿಐಸಿಐ ಬ್ಯಾಂಕ್‌ ₹12,085 ಕೋಟಿ, ಹಿಂದೂಸ್ತಾನ್‌ ಯೂನಿಲಿವರ್‌ ₹11,348 ಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ₹10,307 ಕೋಟಿ ಮತ್ತು ಇನ್ಪೊಸಿಸ್‌ ₹6,355 ಕೋಟಿಯಷ್ಟು ಎಂ ಕ್ಯಾಪ್‌ ಗಳಿಸಿವೆ.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ₹574 ಕೋಟಿಯಷ್ಟು ಇಳಿಕೆ ಕಂಡಿದೆ.

ಪ್ರಮುಖ 10 ಕಂಪನಿಗಳ ಪೈಕಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮೌಲ್ಯಯುತ ಸಂಸ್ಥೆ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇನ್ಪೊಸಿಸ್‌, ಹಿಂದೂಸ್ತಾನ್ ಯೂನಿಲಿವರ್‌, ಭಾರ್ತಿ ಏರ್‌ಟೆಲ್‌, ಐಟಿಸಿ, ಎಸ್‌ಬಿಐ ಮತ್ತು ಬಜಾಜ್‌ ಫೈನಾನ್ಸ್‌ ಇದೆ.

ಕಳೆದ ವಾರ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) 1,511 ಅಂಶ ಅಥವಾ ಶೇ 2.29ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.