ADVERTISEMENT

ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ಪಿಟಿಐ
Published 15 ಅಕ್ಟೋಬರ್ 2023, 15:31 IST
Last Updated 15 ಅಕ್ಟೋಬರ್ 2023, 15:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಮುಖ 10 ಸಂಸ್ಥೆಗಳ 6 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಕಳೆದ ವಾರ ₹70,527 ಕೋಟಿಗೆ ಏರಿಕೆಯಾಗಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅತಿ ಹೆಚ್ಚು ಲಾಭಗಳಿಸಿದೆ.

ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌, ಐಟಿಸಿ, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭಗಳಿಸಿದ್ದರೆ, ಇನ್ಫೊಸಿಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌), ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬಜಾಜ್‌ ಫೈನಾನ್ಸ್‌ ಹಿಂದುಳಿದಿವೆ.  

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯ ₹22,191 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಮೌಲ್ಯವು ₹15.9 ಲಕ್ಷ ಕೋಟಿ ಕೋಟಿಗೆ ಏರಿಕೆಯಾಗಿದೆ. ಇದು 10 ಪ್ರಮುಖ ಸಂಸ್ಥೆಗಳಲ್ಲಿಯೇ ಅತಿ ಹೆಚ್ಚಿನ ಏರಿಕೆ ಎನಿಸಿಕೊಂಡಿದೆ. 

ಹಿಂದೂಸ್ತಾನ್‌ ಯೂನಿಲಿವರ್‌ ₹17,225 ಕೋಟಿ, ಭಾರ್ತಿ ಏರ್‌ಟೆಲ್‌ ₹16,953 ಕೋಟಿ, ಐಟಿಸಿ ₹7,607 ಕೋಟಿ, ಐಸಿಐಸಿಐ ಬ್ಯಾಂಕ್‌ ₹4,581 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ₹1,971 ಕೋಟಿ ಹೆಚ್ಚಾಗಿದೆ. ಇನ್ಫೊಸಿಸ್‌ ₹19,403 ಕೋಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ₹18,258, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ₹16,019 ಕೋಟಿ ಮತ್ತು ಬಜಾಜ್‌ ಫೈನಾನ್ಸ್‌ ₹7,137 ಕೋಟಿ ಇಳಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.