ನವದೆಹಲಿ: ಇ–ಕಾಮರ್ಸ್ ವೇದಿಕೆ ಮೀಶೊ ಕಳೆದ ಒಂದು ವರ್ಷದಲ್ಲಿ 2.2 ಕೋಟಿ ಅನುಮಾನಾಸ್ಪದ ವಹಿವಾಟನ್ನು ತಡೆಗಟ್ಟಿದ್ದು, 12 ಪ್ರಕರಣಗಳನ್ನು ದಾಖಲಿಸಿದೆ ಎಂದು ಕಂಪನಿಯ ವಾರ್ಷಿಕ ವರದಿ ಸೋಮವಾರ ತಿಳಿಸಿದೆ.
ಕಂಪನಿಯು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ನೆರವಿನಿಂದ 13 ಲಕ್ಷ ನಕಲಿ ಆರ್ಡರ್‌ಗಳು ಮತ್ತು 77 ಲಕ್ಷ ವಂಚನೆ ಪ್ರಯತ್ನಗಳನ್ನು ತಡೆಗಟ್ಟಿವೆ ಎಂದು ತಿಳಿಸಿದೆ.
ಕೋಲ್ಕತ್ತ ಮತ್ತು ರಾಂಚಿಯಲ್ಲಿ 40ಕ್ಕೂ ಹೆಚ್ಚು ಶಂಕಿತರ ವಿರುದ್ಧ 9 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ, ವಂಚನೆಯನ್ನು ತಡೆಗಟ್ಟುವಲ್ಲಿ ಶೇ 98ರಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸಿದೆ ಎಂದು ವರದಿ ಹೇಳಿದೆ.
ಕಳೆದ ಅಕ್ಟೋಬರ್‌ನಿಂದ ಲಾಟರಿ ವಂಚನೆ ಘಟನೆಗಳನ್ನು ಶೇ 75 ರಷ್ಟು ಕಡಿಮೆ ಮಾಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.