ADVERTISEMENT

ಸಿಬ್ಬಂದಿಗೆ 52 ತಿಂಗಳ ಭರ್ಜರಿ ಬೋನಸ್‌! ಮತ್ತೆ ಸುದ್ದಿಯಾದ ‘ಎವರ್‌ಗ್ರೀನ್’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2023, 8:15 IST
Last Updated 9 ಜನವರಿ 2023, 8:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ತೈವಾನ್ ಮೂಲದ ಹಡಗು ಸಂಸ್ಥೆ ‘ಎವರ್‌ಗ್ರೀನ್’ ತನ್ನ ಕೆಲವು ಉದ್ಯೋಗಿಗಳಿಗೆ ವರ್ಷಾಂತ್ಯದ ಬೋನಸ್‌ಗಳನ್ನು ನೀಡುತ್ತಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಹೆಚ್ಚಿನ ಉದ್ಯೋಗಿಗಳು 10 ರಿಂದ 45 ತಿಂಗಳ ಸಂಬಳವನ್ನು ಬೋನಸ್‌ ಆಗಿ ಪಡೆದಿದ್ದಾರೆ. ಉತ್ತಮ ಕಾರ್ಯ ನಿರ್ವಹಿಸಿರುವವರಿಗೆ 52 ತಿಂಗಳ ವೇತನವನ್ನು ಬೋನಸ್‌ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸುದ್ದಿ ಮಾಧ್ಯಮ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಎವರ್‌ಗ್ರೀನ್ ತನ್ನ ಉದ್ಯೋಗಿಗಳಿಗೆ 2021 ರಲ್ಲಿ 40 ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡಿ ಸುದ್ದಿಯಾಗಿತ್ತು.

ADVERTISEMENT

ಜಗತ್ತನ್ನು ತಲ್ಲಣಗೊಳಿಸಿದ್ದ ಎವರ್‌ಗ್ರೀನ್‌

ಎವರ್‌ಗ್ರೀನ್ ಸಂಸ್ಥೆ 2021ರ ಆರಂಭದಲ್ಲಿ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಸಂಸ್ಥೆಯ ಮಾಲಿಕತ್ವದ ಹಡಗೊಂದು ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡು, ಹಲವು ದಿನ ಅಲ್ಲಿಯೇ ಇತ್ತು. ಹೀಗಾಗಿ ಇಡೀ ಜಗತ್ತಿನ ಸರಬರಾಜು ವ್ಯವಸ್ಥೆಯೇ ಏರುಪೇರಾಗಿತ್ತು.

91.6 ಕೋಟಿ ಡಾಲರ್‌ (₹6,813.07 ಕೋಟಿ) ಪರಿಹಾರ ಮೊತ್ತ ನೀಡುವಂತೆ ಸೂಯೆಜ್‌ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು. ಬಳಿಕ ಈ ಮೊತ್ತವನ್ನು 55.5 ಕೋಟಿ ಡಾಲರ್‌ಗೆ(₹4,127.89) ಇಳಿಕೆ ಮಾಡಲಾಗಿತ್ತು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.