ADVERTISEMENT

ಜನವರಿಯಿಂದ ಮರ್ಸಿಡೀಸ್‌ ಬೆಂಜ್‌ ಕಾರಿನ ಬೆಲೆ ಹೆಚ್ಚಳ

ಪಿಟಿಐ
Published 13 ಡಿಸೆಂಬರ್ 2023, 16:04 IST
Last Updated 13 ಡಿಸೆಂಬರ್ 2023, 16:04 IST
<div class="paragraphs"><p>ಮರ್ಸಿಡೀಸ್‌ ಬೆಂಜ್‌ (ಪ್ರಾತಿನಿಧಿಕ ಚಿತ್ರ)</p></div>

ಮರ್ಸಿಡೀಸ್‌ ಬೆಂಜ್‌ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡೀಸ್‌ ಬೆಂಜ್‌ ಜನವರಿ 1ರಿಂದ ಭಾರತದಲ್ಲಿ ತನ್ನ ಆಯ್ದ ಮಾದರಿಗಳ ಕಾರುಗಳ ಬೆಲೆಯನ್ನು ಶೇ 2ರ ವರೆಗೆ ಹೆಚ್ಚಿಸಲಿದೆ. 

ತಯಾರಿಕಾ ವೆಚ್ಚ ಹೆಚ್ಚಳ, ಸರಕು ಮತ್ತು ಸಾರಿಗೆ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣದಿಂದ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.

ADVERTISEMENT

ಮಾರುತಿ ಸುಜುಕಿ, ಹುಂಡೈ ಮೋಟರ್‌ ಇಂಡಿಯಾ, ಟಾಟಾ ಮೋಟರ್ಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹೋಂಡಾ, ಫೋಕ್ಸ್‌ವ್ಯಾಗನ್, ಔಡಿ, ಬಿಎಂಡಬ್ಯ್ಲು ಸೇರಿದಂತೆ ಹಲವು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಜನವರಿಯಿಂದ ಹೆಚ್ಚಳ ಮಾಡುವುದಾಗಿ ಈಗಾಗಲೇ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.