ADVERTISEMENT

‘ಏಪ್ರಿಲ್‌ 1ರಿಂದ ಹೊಸ ಬ್ಯಾಂಕ್‌ ಕಾರ್ಯಾಚರಣೆ’

ಪಿಟಿಐ
Published 14 ಸೆಪ್ಟೆಂಬರ್ 2019, 19:45 IST
Last Updated 14 ಸೆಪ್ಟೆಂಬರ್ 2019, 19:45 IST
   

ಕೋಲ್ಕತ್ತ: ‘ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್‌ ಆಫ್‌ ಕಾಮರ್ಸ್‌ ವಿಲೀನದ ಬಳಿಕ ಹೊಸ ಬ್ಯಾಂಕ್‌ ಏಪ್ರಿಲ್‌ 1ರಿಂದ ಕಾರ್ಯಾರಂಭ ಮಾಡಲಿದೆ’ ಎಂದು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಅಶೋಕ್‌ ಕುಮಾರ್‌ ಪ್ರಧಾನ್‌ ತಿಳಿಸಿದ್ದಾರೆ.

‘ವಿಲೀನಗೊಂಡ ಬಳಿಕ ಬ್ಯಾಂಕ್‌ಗೆ ಹೊಸ ಹೆಸರು ಇಡುವ ಸಾಧ್ಯತೆ ಇದೆ. ಒಟ್ಟಾರೆ ವಹಿವಾಟು ಮೊತ್ತ ₹ 18 ಲಕ್ಷ ಕೋಟಿಗಳಷ್ಟಾಗಲಿದ್ದು, ಎಸ್‌ಬಿಐನ ಬಳಿಕ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್‌ ಆಗಿ ಹೊರಹೊಮ್ಮಲಿದೆ.

‘ವಿಲೀನದ ಬಳಿಕ ಸಿಬ್ಬಂದಿ ಕಡಿತ ಮಾಡುವುದಿಲ್ಲ. ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೊಳಿಸುವ ಯಾವುದೇ ನಿರ್ಧಾರವು ಇಲ್ಲ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

10 ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಆಗಸ್ಟ್‌ 30ರಂದು ಘೋಷಿಸಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 16 ಸಾವಿರ ಕೋಟಿ ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ₹ 1,600 ಕೋಟಿ ನೆರವನ್ನು ಪ್ರಕಟಿಸಿದೆ.

ವಿಲೀನದ ಬಳಿಕ
* 1 ಲಕ್ಷ ಸಿಬ್ಬಂದಿ ಸಂಖ್ಯೆ
* 11,400 ಶಾಖೆಗಳ ಒಟ್ಟಾರೆ ಸಂಖ್ಯೆ
*6% ವಸೂಲಾಗದ ಸಾಲದಲ್ಲಿ ಆಗಲಿರುವ ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.