ಮುಂಬೈ: ಗೃಹಸಾಲ ಮಾರುಕಟ್ಟೆಯ ಪ್ರಮುಖ ಕಂಪನಿ ಎಚ್‌ಡಿಎಫ್‌ಸಿ ಹಾಗೂ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನವು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೇಖ್ ಹೇಳಿದ್ದಾರೆ.
ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಡಳಿತ ಮಂಡಳಿಗಳು ಜೂನ್ 30ರಂದು ಸಭೆ ಸೇರಿ, ವಿಲೀನಕ್ಕೆ ಒಪ್ಪಿಗೆ ನೀಡಲಿವೆ ಎಂದು ಪಾರೇಖ್ ತಿಳಿಸಿದ್ದಾರೆ.
ಎಚ್‌ಡಿಎಫ್‌ಸಿಯನ್ನು ಸ್ವಾಧೀನಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದಿನ ವರ್ಷದ ಏಪ್ರಿಲ್ 4ರಂದು ಒಪ್ಪಿಗೆ ನೀಡಿತು. ವಿಲೀನದ ನಂತರದ ಬ್ಯಾಂಕ್, ದೇಶದ ಹಣಕಾಸು ಸೇವಾ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಯಾಗಲಿದೆ. ದೇಶದ ಕಾರ್ಪೊರೇಟ್ ಇತಿಹಾಸ ಕಂಡಿರುವ ಅತಿದೊಡ್ಡ ವಹಿವಾಟು ಇದು ಎಂದು ಹೇಳಲಾಗಿದೆ. ವಿಲೀನದ ನಂತರದ ಕಂಪನಿಯ ಆಸ್ತಿ ಮೌಲ್ಯವು ಸರಿಸುಮಾರು ₹18 ಲಕ್ಷ ಕೋಟಿ ಆಗಲಿದೆ.
ಎಚ್‌ಡಿಎಫ್‌ಸಿ ಷೇರುದಾರರಿಗೆ ಪ್ರತಿ 25 ಷೇರುಗಳಿಗೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳು ಸಿಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.