ನವದೆಹಲಿ: ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ಯೋಜನೆಯು ತಿಂಗಳಾಂತ್ಯಕ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜನವರಿ 8ರವರೆಗೂ ಸಂಸತ್ ಅಧಿವೇಶನ ನಡೆಯಲಿದ್ದು,ವಿಲೀನ ಯೋಜನೆಯನ್ನು ಸಂಸತ್‌ನಲ್ಲಿ ಮಂಡಿಸಬೇಕಿದೆ.
ಮೂರು ಬ್ಯಾಂಕ್‌ಗಳ ಆಡಳಿತ ಮಂಡಳಿಯಿಂದಷೇರು ವಿನಿಮಯ ಪ್ರಮಾಣ ಮತ್ತು ಪ್ರವರ್ತಕರಿಂದ ಅಗತ್ಯವಿರುವ ಬಂಡವಾಳದ ಮಾಹಿತಿಗಳನ್ನು ಪಡೆದು ಅಂತಿಮ ಯೋಜನೆ ಸಿದ್ಧವಾಗಲಿದೆ ಎಂದು ಹೇಳಿವೆ.
ವಿಲೀನದ ಬಳಿಕ ಅಸ್ತಿತ್ವಕ್ಕೆ ಬರಲಿರುವ ಬ್ಯಾಂಕ್‌ಮುಂದಿನ ಹಣಕಾಸು ವರ್ಷದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಹೊಸ ಬ್ಯಾಂಕ್‌ಗೆ ಬಂಡವಾಳ ನೆರವು ನೀಡುವುದಾಗಿ ಹಣಕಾಸು ಸಚಿವಾಲಯ ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.