ನವದೆಹಲಿ (ಪಿಟಿಐ): ಎಂಜಿ ಮೋಟರ್ ಇಂಡಿಯಾ ಕಂಪನಿಯು ಎರಡರಿಂದ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳಲ್ಲಿ ಬಹುಪಾಲನ್ನು ಸ್ಥಳೀಯ ಪಾಲುದಾರರಿಗೆ ಮಾರಲು ಯೋಜನೆ ರೂಪಿಸುತ್ತಿರುವುದಾಗಿ ಬುಧವಾರ ಹೇಳಿದೆ.
ಭಾರತದಲ್ಲಿ ಐದು ವರ್ಷಗಳ ವಹಿವಾಟಿನ ಕಾರ್ಯಸೂಚಿಯ ಭಾಗವಾಗಿ ಈ ಕ್ರಮಕ್ಕೆ ಕಂಪನಿ ಮುಂದಾಗಿದೆ. ಬ್ರಿಟಿಷ್ ಬ್ರ್ಯಾಂಡ್ ಆಗಿರುವ ಎಂಜಿ ಮೋಟರ್ ಸದ್ಯ ಚೀನಾದ ಎಸ್‌ಎಐಸಿ ಮೋಟರ್ ಕಾರ್ಪ್‌ನ ಒಡೆನತದಲ್ಲಿದೆ.
2028ರ ಒಳಗಾಗಿ ದೇಶದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಕಂಪನಿಯು ₹5 ಸಾವಿರ ಕೋಟಿ ಹೂಡಿಕೆ ಯೋಜನೆ ಹೊಂದಿದೆ. ತನ್ನ ಮುಂದಿನ ಹಂತದ ಬೆಳವಣಿಗೆಗಾಗಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.
ಚೀನಾದ ಮಾತೃಸಂಸ್ಥೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸುವ ಯೋಜನೆಯು ಇದುವರೆಗೆ ಯಶಸ್ವಿಯಾಗಿಲ್ಲ.
ಉದ್ಯಮದ ಮೂಲಗಳ ಪ್ರಕಾರ, ಕಂಪನಿಯು ಸರ್ಕಾರದ ಒಪ್ಪಿಗೆಗಾಗಿ ಎರಡು ವರ್ಷಗಳಿಂದ ಕಾಯುತ್ತಿದೆ. ಹೀಗಾಗಿ ಬಂಡವಾಳ ಸಂಗ್ರಹಿಸಲು ಬೇರೆ ಆಯ್ಕೆಗಳನ್ನು ಪರಿಶೀಲಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.