ADVERTISEMENT

ಓಲಾ ಎಲೆಕ್ಟ್ರಿಕ್‌ ವಿರುದ್ಧ ದೂರು: ವರದಿ ಸಲ್ಲಿಕೆಗೆ ಕೇಂದ್ರ ಸೂಚನೆ

ಪಿಟಿಐ
Published 10 ಅಕ್ಟೋಬರ್ 2024, 14:04 IST
Last Updated 10 ಅಕ್ಟೋಬರ್ 2024, 14:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್‌ ವಿರುದ್ಧ ಗ್ರಾಹಕರು, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ವಿವರವಾದ ವರದಿ ಸಲ್ಲಿಸುವಂತೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯವು, ಭಾರತೀಯ ಮೋಟಾರು ವಾಹನ ಸಂಶೋಧನಾ ಸಂಸ್ಥೆಗೆ (ಎಆರ್‌ಎಐ) ನಿರ್ದೇಶನ ನೀಡಿದೆ.

ಓಲಾ ಎಲೆಕ್ಟ್ರಿಕ್‌ ಕಂಪನಿಯು ಫೇಮ್‌–2 ಮತ್ತು ಪಿಎಂ ಇ–ಡ್ರೈವ್‌ ಯೋಜನೆಯ ಫಲಾನುಭವಿಯಾಗಿದೆ. ಎಆರ್‌ಎಐ ಅರ್ಹತೆಯ ಪ್ರಮಾಣ ಪತ್ರವನ್ನು  ನೀಡಿದೆ. 

ADVERTISEMENT

ಅಕ್ಟೋಬರ್ 7ರಂದು ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ದಿಕ್ಕುತಪ್ಪಿಸುವ ಜಾಹೀರಾತು, ಅನಧಿಕೃತ ವ್ಯಾಪಾರ ಚಟುವಟಿಕೆ ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆರೋಪದಡಿ ಓಲಾ ಎಲೆಕ್ಟ್ರಿಕ್‌ಗೆ ಷೋಕಾಸ್‌ ನೋಟಿಸ್‌ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.