ADVERTISEMENT

ಮಿಡ್‌, ಸ್ಮಾಲ್‌ ಕ್ಯಾಪ್‌: ₹30,350 ಕೋಟಿ ಹೂಡಿಕೆ

ಪಿಟಿಐ
Published 20 ಅಕ್ಟೋಬರ್ 2024, 14:37 IST
Last Updated 20 ಅಕ್ಟೋಬರ್ 2024, 14:37 IST
ಮ್ಯೂಚುವಲ್‌ ಫಂಡ್‌
ಮ್ಯೂಚುವಲ್‌ ಫಂಡ್‌   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ನಲ್ಲಿ ₹30,350 ಕೋಟಿ ಬಂಡವಾಳ ಹೂಡಿಕೆಯಾಗಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಈ ಫಂಡ್‌ಗಳಲ್ಲಿ ₹32,924 ಕೋಟಿ ಹೂಡಿಕೆಯಾಗಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಭಾನುವಾರ ತಿಳಿಸಿದೆ.

ಮಿಡ್‌ ಕ್ಯಾಪ್‌ ಫಂಡ್‌ ₹14,756 ಕೋಟಿ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ ₹15,586 ಕೋಟಿಯನ್ನು‌ ಆಕರ್ಷಿಸಿವೆ.

ADVERTISEMENT

ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಕ್ರಮವಾಗಿ ಶೇ 20 ಮತ್ತು ಶೇ 24ರಷ್ಟು ಗಳಿಕೆ ನೀಡಿವೆ. ಈ ಎರಡು ಯೋಜನೆಯಡಿ ಹೂಡಿಕೆದಾರರ ಸಂಖ್ಯೆ 4 ಕೋಟಿಗೆ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.32 ಕೋಟಿ ಇತ್ತು.

ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಯೋಜನೆಗಳ ಒಟ್ಟು ಸಂಪತ್ತಿನ ಮೌಲ್ಯ ಶೇ 63ರಷ್ಟು ಏರಿಕೆಯಾಗಿದ್ದು, ₹7.26 ಲಕ್ಷ ಕೋಟಿಯಾಗಿದೆ. 2023–24ರ ಇದೇ ಅವಧಿಯಲ್ಲಿ ₹4.44 ಲಕ್ಷ ಕೋಟಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.