ಬೆಂಗಳೂರು: ನಟ ಮಿಲಿಂದ್ ಸೋಮನ್ ಅವರ ಸಹಯೋಗದಡಿ ಹಮ್ಮಿಕೊಂಡಿದ್ದ ಟಿವಿಎಸ್ ಮೋಟಾರ್ ಕಂಪನಿಯ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಆದ ಟಿವಿಎಸ್ ಐಕ್ಯೂಬ್‌ನ ಗ್ರೀನ್‍ರೈಡ್ ಅಭಿಯಾನವು ಸೋಮವಾರ ನಗರದಲ್ಲಿ ಮುಕ್ತಾಯವಾಯಿತು.
ಪುಣೆಯಲ್ಲಿ ವಾರದ ಹಿಂದೆ ಈ ಅಭಿಯಾನ ಆರಂಭವಾಗಿತ್ತು. ಪರಿಸರ ಸ್ನೇಹಿ ಆಶಯದಡಿ ಸುಸ್ಥಿರ ಸಾರಿಗೆ ವಿಧಾನ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಗುರಿಯಾಗಿದೆ.
ಟಿವಿಎಸ್ ಐಕ್ಯೂಬ್‍ನಲ್ಲಿ ಪ್ರಯಾಣ ಆರಂಭಿಸಿದ ಮಿಲಿಂದ್ ಅವರು, ಒಟ್ಟು 200 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.