ADVERTISEMENT

ದೇಶದಲ್ಲಿ ಹಾಲಿನ ಉತ್ಪಾದನೆ ಶೇ 4ರಷ್ಟು ಏರಿಕೆ: ಸಚಿವ ರಾಜೀವ್‌ ರಂಜನ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:59 IST
Last Updated 26 ನವೆಂಬರ್ 2024, 13:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ 2023–24ನೇ ಆರ್ಥಿಕ ಸಾಲಿನಡಿ 239.30 ದಶಲಕ್ಷ ಟನ್‌ ಹಾಲು ಉತ್ಪಾದನೆಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್‌ ರಂಜನ್ ಸಿಂಗ್‌ ತಿಳಿಸಿದ್ದಾರೆ.

ಮಂಗಳವಾರ ನಡೆದ ರಾಷ್ಟ್ರೀಯ ಹಾಲು ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2022–23ರಲ್ಲಿ 230.58 ದಶಲಕ್ಷ ಟನ್‌ ಹಾಲು ಉತ್ಪಾದನೆಯಾಗಿತ್ತು ಎಂದರು.

ತಲಾವಾರು ಹಾಲಿನ ಲಭ್ಯತೆ ಪ್ರಮಾಣದಲ್ಲೂ ಏರಿಕೆಯಾಗಿದೆ. 2022–23ರಲ್ಲಿ  ದಿನವೊಂದಕ್ಕೆ ಒಬ್ಬರಿಗೆ 459 ಗ್ರಾಂ ಹಾಲು ಲಭಿಸುತ್ತಿತ್ತು. 2023–24ರಲ್ಲಿ 471 ಗ್ರಾಂಗೆ ಏರಿಕೆಯಾಗಿದೆ. ಹಾಲು ಉತ್ಪಾದನೆಯಲ್ಲಿ ಜಾಗತಿಕ ಸರಾಸರಿ ಏರಿಕೆ ಶೇ 2ಕ್ಕೆ ಹೋಲಿಸಿದರೆ ಭಾರತದಲ್ಲಿ ಶೇ 6ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.