ADVERTISEMENT

‘123456’ ಹೆಚ್ಚು ಜನ ಬಳಸುವ ಪಾಸ್‌ವರ್ಡ್‌

ಏಜೆನ್ಸೀಸ್
Published 21 ಏಪ್ರಿಲ್ 2019, 20:15 IST
Last Updated 21 ಏಪ್ರಿಲ್ 2019, 20:15 IST
password
password   

ಲಂಡನ್‌ (ಪಿಟಿಐ): ಲಕ್ಷಾಂತರ ಜನರು ‘123456’, ಮತ್ತು ‘qwerty' ಅನ್ನು ಪಾಸ್‌ವರ್ಡ್‌ ಆಗಿ ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ಬ್ರಿಟನ್‌ನ ರಾಷ್ಟ್ರೀಯ ಸೈಬರ್‌ ಭದ್ರತಾ ಕೇಂದ್ರ (ಎನ್‌ಸಿಎಸ್‌ಸಿ) ಈ ವಿಶ್ಲೇಷಣೆ ಮಾಡಿದೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಳಸುತ್ತಿರುವ ಈ ಪಾಸ್‌ವರ್ಡ್‌ಗಳು ಹ್ಯಾಕ್‌ ಆಗುವ ಸಾಧ್ಯತೆಗಳಿವೆ. ಇದರಿಂದ ಜನರು ವಿವಿಧ ರೀತಿಯಲ್ಲಿ ವಂಚನೆಗೆ ಒಳಗಾಗುವ ಹಾಗೂ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಎಚ್ಚರಿಸಿದೆ.

‘123456’ ಅಂಕಿಗಳನ್ನು ಅತಿ ಹೆಚ್ಚು ಜನರು ಪಾಸ್‌ವರ್ಡ್‌ ಆಗಿ ಬಳಸುತ್ತಿದ್ದಾರೆ. ನಂತರ ಸ್ಥಾನದಲ್ಲಿ ‘123456789’ ಇದೆ. ಆ ನಂತರದ ಸ್ಥಾನದಲ್ಲಿ ಕ್ರಮವಾಗಿ ‘qwerty’, ‘password’ ಮತ್ತು ‘1111111’ ಅಂಕಿಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ADVERTISEMENT

ಅದಲ್ಲದೆ ಪಾಸ್‌ವರ್ಡ್‌ಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಹೆಸರುಗಳಲ್ಲಿ ‘Ashley' ಮೊದಲ ಸ್ಥಾನದಲ್ಲಿದೆ. 'Mihael', 'Daniel', 'Jessica' ಮತ್ತು ‘Charlie’ ನಂತರದ ಸ್ಥಾನಗಳಲ್ಲಿವೆ. ಅದಲ್ಲದೆ ಹಲವರು ತಮ್ಮ ನೆಚ್ಚಿನ ಫುಟ್‌ಬಾಲ್‌ ತಂಡಗಳ ಹೆಸರನ್ನು ಪಾಸ್‌ವರ್ಡ್‌ ಆಗಿ ಹೊಂದಿದ್ದಾರೆ.

‘ಬಹುತೇಕರು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿ ಗೊತ್ತಾಗುವ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುತ್ತಿದ್ದಾರೆ. ಇದು ಅವರನ್ನು ತೊಂದರೆಗೆ ಸಿಲುಕಿಸಬಹುದು ಎನ್ನುತ್ತಾರೆ ಎನ್‌ಸಿಎಸ್‌ಸಿ ತಾಂತ್ರಿಕ ನಿರ್ದೇಶಕ ಐಯಾನ್‌ ಲೆವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.